ರಾಷ್ಟ್ರೀಯ

ಅಕ್ರಮ ಪ್ರವೇಶ ಮತ್ತು ನಿಯಮ ಬಾಹಿರವಾಗಿ ಮೀನುಗಾರಿಕೆ; ಮೀನಿನಾಸೆಗೆ ಹೋಗಿ ಲಂಕಾ ಜೈಲು ಸೇರಿದ ಭಾರತೀಯ ಮೀನುಗಾರರು

Pinterest LinkedIn Tumblr

9251unnamed (1)ಅಕ್ರಮ ಪ್ರವೇಶ ಮತ್ತು ನಿಯಮ ಬಾಹಿರವಾಗಿ ಮೀನುಗಾರಿಕೆ ನಡೆಸಿದ ಹಿನ್ನೆಲೆಯಲ್ಲಿ ಶ್ರೀಲಂಕಾ ನೌಕಾಪಡೆ ಮಂಗಳವಾರ ಮುಂಜಾನೆ ಕಾಟ್​ಚಾಠೇವು ಸಮೀಪದಲ್ಲಿ  15 ಮಂದಿ ಭಾರತೀಯ ಮೀನುಗಾರರನ್ನು ವಶಕ್ಕೆ ಪಡೆದಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಸೋಮವಾರ ಸಾಯಂಕಾಲ ಬೋಟ್​ನಲ್ಲಿ ಮೀನುಗಾರರು ಮೀನುಗಾರಿಕೆಗಾಗಿ ತೆರಳಿದ್ದರು. ಮೀನುಗಳು ಬಹಳ ಕಡಿಮೆ ಪ್ರಮಾಣದಲ್ಲಿ ಸಿಕ್ಕಿರುವ ಕಾರಣ ಇನ್ನಷ್ಟು ಮೀನು ಹಿಡಿಯುವ ಆಸೆಯಿಂದ ಮುಂದಕ್ಕೆ ತೆರಳಿದ್ದು ಈ ಸಮಯದಲ್ಲಿ ಅರಿವಿಲ್ಲದಂತೆ ಸಮುದ್ರದ ಗಡಿ ದಾಟಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಶ್ರೀಲಂಕಾ ನೌಕಾಪಡೆ  15 ಮಂದಿ ಮೀನುಗಾರರನ್ನು  ಹಾಗೂ ಮೂರು ಬೋಟ್​ಗಳನ್ನು ವಶಕ್ಕೆ ಪಡೆದಿದ್ದು ಎಲ್ಲರ ಮೇಲೆಯೂ ಅಕ್ರಮ ಗಡಿ ಪ್ರವೇಶದ ಸಂಬಂಧ ಪ್ರಕರಣ ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment