ರಾಷ್ಟ್ರೀಯ

ಇಳಿಕೆಯ ಹಾದಿ ಹಿಡಿದಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಕಡಿಮೆ; ಮತ್ತಷ್ಟು ಅಗ್ಗವಾದ ಚಿನ್ನ !

Pinterest LinkedIn Tumblr

1552unnamed (5)ಕಳೆದ ವಾರವಷ್ಟೇ ಇಳಿಕೆಯ ಹಾದಿ ಹಿಡಿದಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಕಡಿಮೆಯಾಗಿದ್ದು ಗ್ರಾಹಕರ ಮೊಗದಲ್ಲಿ ಮಂದಹಾಸ ಮಿನುಗಿದೆ.

ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಬೆಲೆ ಇಳಿಮುಖವಾಗಿರುವ ಹಾಗೂ ಚಿನ್ನಾಭರಣ ತಯಾರಕರಿಂದ ಬೇಡಿಕೆ ಕುಸಿತ ಕಂಡ ಹಿನ್ನೆಲೆಯಲ್ಲಿ  ನವದೆಹಲಿ ಮತ್ತು ಮುಂಬೈನ ಚಿನಿವಾರ ಪೇಟೆಯಲ್ಲಿ ಬಂಗಾರದ ಧಾರಣೆ ಪ್ರತಿ ಹತ್ತು ಗ್ರಾಂ ಗೆ 105ರವರೆಗೂ ಕುಸಿತ ಕಂಡಿತು.

ಈ ಹಿನ್ನೆಲೆಯಲ್ಲಿ  ಸ್ಟ್ಯಾಂಡರ್ಡ್ ಚಿನ್ನ ಪ್ರತಿ ಹತ್ತು ಗ್ರಾಂ ಗೆ 27,075ಕ್ಕೂ, ಅಪರಂಜಿ ಚಿನ್ನ 27,225ಕ್ಕೂ ಇಳಿದಿದ್ದು ಈ ನಡುವೆ ಬೆಳ್ಳಿಯ ದರವೂ ಸಹ ಕುಸಿತ ಕಂಡು ಪ್ರತಿ ಕೆ ಜಿ ಗೆ 38,400ರಂತೆ ಮಾರಾಟವಾಯಿತು.

Write A Comment