ರಾಷ್ಟ್ರೀಯ

ಆರು ಮಕ್ಕಳಿಗೆ ದಯಾಮರಣ ಕೋರಿ ತಂದೆಯಿಂದ ರಾಷ್ಟ್ರಪತಿಗೆ ಪತ್ರ

Pinterest LinkedIn Tumblr

Father-Wants

ಆಗ್ರಾ, ಜೂ.2: ಆಗ್ರಾದಿಂದ ಬಂದಿರುವ ಹೃದಯ ಹಿಂಡುವ ವಾರ್ತೆಯೊಂದರಲ್ಲಿ, ವ್ಯಕ್ತಿಯೊಬ್ಬ 8ರಿಂದ 18ರ ಹರೆಯದ ನಡುವಿನ ತನ್ನೆಲ್ಲ 6 ಮಂದಿ ಮಕ್ಕಳಿಗೆ ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾನೆ.

ಮಕ್ಕಳಲ್ಲಿ ಶಕ್ತಿಗುಂದಿಸುವ ವಿರಳವಾದ ನರರೋಗವೊಂದು ಪತ್ತೆಯಾಗಿದ್ದು, ಸೊಂಟದಿಂದ ಕೆಳಗಿನ ಅವರ ಶರೀರಗಳನ್ನು ನಿಶ್ಚೇಷ್ಟಿತಗೊಳಿಸಿದೆ ಹಾಗೂ ಸ್ವರ ಮತ್ತು ದೃಷ್ಟಿಗಳನ್ನು ಹಾನಿಗೊಳಿಸಿದೆ. ರೋಗವು ಗುಣಪಡಿಸ ಬಹುದಾದುದಾಗಿದ್ದರೂ, ಆತನಲ್ಲಿ ಚಿಕಿತ್ಸೆ ಕೊಡಿಸುವ ಆರ್ಥಿಕ ಶಕ್ತಿಯಿಲ್ಲ.

ಇನ್ನೆರಡು ಮೂರು ವರ್ಷಗಳಲ್ಲಿ ತನ್ನ ಮಕ್ಕಳು ನಡೆಯಲಾಗದ ಸ್ಥಿತಿಗೆ ತಲುಪುತ್ತಾರೆ. ಅವರು ನೋವಿನಲ್ಲೇ ಬದುಕಬೇಕಾಗುತ್ತದೆ. ಅವರಿಗೆ ಆ ಪರಿಸ್ಥಿತಿ ಬರುವುದನ್ನು ತಾನು ಬಯಸುವುದಿಲ್ಲವೆಂದು ಆ ನತದೃಷ್ಟ ತಂದೆ, ಮುಹಮ್ಮದ್ ನಝೀರ್ ಎಂಬವರು ಹೇಳಿದ್ದಾರೆ.

ಸ್ಥಳೀಯ ಆಡಳಿತವೀಗ ಮಕ್ಕಳನ್ನು ಪರೀಕ್ಷಿಸುವುದಕ್ಕಾಗಿ ವೈದ್ಯರ ತಂಡವೊಂದನ್ನು ಕಳುಹಿಸಿದೆ. ನಝೀರ್‌ನ ಈ ಬೇಡಿಕೆ ದಯಾಮರಣದ ಕುರಿತು ಚರ್ಚೆಗೆ ಮತ್ತೊಮ್ಮೆ ಚಾಲನೆ ನೀಡಿದೆ. ಸತತ ಜೀವಚ್ಛವದಂತೆ ಬದುಕುತ್ತಿರುವ ರೋಗಿಗಳ ಜೀವರಕ್ಷಕ ವ್ಯವಸ್ಥೆಯನ್ನು ಹಿಂದೆಗೆಯುವುದು ನಿಷ್ಕ್ರಿಯ ದಯಾಮರಣವಾಗಿದ್ದು, ಅದಕ್ಕೆ ಭಾರತದಲ್ಲಿ ಕಾನೂನಿನ ಅನುಮತಿಯಿದೆ.

Write A Comment