ರಾಷ್ಟ್ರೀಯ

ಡೆಹ್ರೂಡೂನ್​ ನಲ್ಲಿ ಸ್ಪೋಟ : ನಾಲ್ವರು ಸೈನಿಕರಿಗೆ ಗಾಯ

Pinterest LinkedIn Tumblr

3704341325-blast-representational-rna

ಡೆಹ್ರೂಡೂನ್​ನ ಗರ್ಹಿ ದಂಡು ಪ್ರದೇಶದ ಗೋರ್ಖಾ ರೈಫಲ್ಸ್ ಕೇಂದ್ರ ಕಚೇರಿಯಲ್ಲಿ ಶನಿವಾರ ಮಧ್ಯಾಹ್ನ ಸ್ಪೋಟವೊಂದು ಸಂಭವಿಸಿದ್ದು, ಈ ಘಟನೆಯಲ್ಲಿ ನಾಲ್ವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಫೋಟಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂಬ ಮಾಹಿತಿ ದೊರೆತಿದ್ದು ಪಡಿತರ ಸಾಮಗ್ರಿ ಒಯ್ಯುತ್ತಿದ್ದ ಟ್ರಕ್​ನ ಒಳಗೆ ಈ ಸ್ಫೋಟ ಸಂಭವಿಸಿದೆ ಎನ್ನಲಾಗುತ್ತಿದ್ದು ಸೇನಾ ಸಿಬ್ಬಂದಿಯೊಬ್ಬರು ನೆಲದ ಮೇಲೆ ಬಿದ್ದಿದ್ದ ಅನುಮಾನಾಸ್ಪದ ವಸ್ತುವೊಂದನ್ನು ಎತ್ತಿಕೊಳ್ಳಲು ಟ್ರಕ್​ನಿಂದ ಕೆಳಕ್ಕೆ ಜಿಗಿದಾಗ ಸ್ಫೋಟ ಸಂಭವಿಸಿತು.

ಆದರೆ ಇನ್ನೂ ಕೆಳಗೆ ಬಿದ್ದಿದ್ದ ವಸ್ತು ಏನು ಎಂಬುದು ಇನ್ನೂ ಖಚಿತವಾಗಿಲ್ಲ. ಈಗಾಗಲೇ ಗಾಯಾಳುಗಳನ್ನು ಸೇನಾ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ  ಬಾಂಬ್ ನಿಷ್ಕ್ರಿಯದಳ ಸ್ಥಳಕ್ಕೆ ಆಗಮಿಸಿ ಸ್ಪೋಟಿಸಿದ ವಸ್ತುವಿನ ಬಗ್ಗೆ ಸಾಕ್ಷ್ಯಸಂಗ್ರಹ ಮಾಡುತ್ತಿದ್ದು ಸ್ಪೋಟದ ರಹಸ್ಯವನ್ನು ಬೇಧಿಸಲು ಮುಂದಾಗಿದ್ದಾರೆ.

Write A Comment