ರಾಷ್ಟ್ರೀಯ

ದಾವೂದ್, ಲಖ್ವಿ, ಸಯೀದ್ ಆಸ್ತಿ ಜಪ್ತಿ:ಪಾಕ್‌ಗೆ ಕೇಂದ್ರ ಸೂಚನೆ

Pinterest LinkedIn Tumblr

Dawood-and-lakwhi

ನವದೆಹಲಿ, ಮೇ 24- ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪಟ್ಟಿ ಸೇರಿರುವ ನಿಷೇಧಿತ ಅಲ್‌ಖೈದಾ ಸಂಘಟನೆಯ ಸಂಬಂಧ ಹೊಂದಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಮೋಸ್ಟ್ ವಾಂಟೆಂಡ್ ಉಗ್ರರಾದ ಹಫೀಜ್ ಸಯೀದ್ ಮತ್ತು ಝಕೀಉರ್ ರೆಹ್ಮಾನ್ ಲಖ್ವಿ ಅವರಿಗೆ ಸೇರಿರುವ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು

ಹಾಕಿಕೊಳ್ಳುವಂತೆ ಪಾಕಿಸ್ತಾನಕ್ಕೆ ಸೂಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ)ಯ ಪಟ್ಟಿಯಲ್ಲಿ ಅಲ್‌ಖೈದಾ ಹಾಗೂ ತಾಲಿಬಾನ್ ಉಗ್ರ ಸಂಘಟನೆಗಳಿಗೆ ನಿಷೇಧ ಹೇರಿದ್ದು , ಅವುಗಳಿಗೆ ಸಂಬಂಧಪಟ್ಟ , ಆಸ್ತಿ-ಪಾಸ್ತಿ, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ದಾವೂದ್ ಇಬ್ರಾಹಿಂ, ಮುಂಬೈ ಸ್ಫೋಟ ರೂವಾರಿ ಲಖ್ವಿ ಹಾಗೂ ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಅವರ ವಿರುದ್ಧ ನಿಷೇಧ ಹೇರಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವಾಗಿರುವ ಪಾಕಿಸ್ತಾನವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಿಷೇಧಿತ ಸಂಘಟನೆಗಳ ಸಂಬಂಧವಿರುವವರು ಹಾಗೂ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಹಾಗೂ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ವಿಶ್ವಸಂಸ್ಥೆ ಸದಸ್ಯನಾಗಿರುವ ಪಾಕಿಸ್ತಾನದ ಕರ್ತವ್ಯವಾಗಿದೆ. ಯಾವುದೇ ಕಾರಣಕ್ಕೂ ಪಾಕಿಸ್ತಾನವು ದುಷ್ಕರ್ಮಿಗಳನ್ನು ಬೆಂಬಲಿಸಬಾರದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Write A Comment