ರಾಷ್ಟ್ರೀಯ

ಮದ್ವೆಯಾದ ಕೂಡಲೇ ಜನ ಮೊದಲೇನು ಮಾಡ್ತಾರೆ..?

Pinterest LinkedIn Tumblr

marriage

ಮನೆಯವರು ನೋಡಿದ್ದಕ್ಕೆ ಎಸ್‌ ಅಂದಿಧ್ದೋ, ಅವ್ರವರೇ ಹುಡುಕಿಕೊಂಡಿಧ್ದೋ.. ಏನೋ ಒಂದು ಅಂತೂ ಮದ್ವೆ ಅಂತಾ ಧಾಮ್‌ ಧೂಮ್‌ ಆಗಿ ನಡೆದೇ ಹೋಯಿತು! ಹೀಗೆ ಮದ್ವೆ ಆದ ಕೂಡಲೇ ಜನ
ಏನ್‌ ಮಾಡ್ತಾರೆ..? ಅಂತಾ ಡೌಟು ಬರೋದು ಸಹಜ. ಹನಿಮೂನ್‌, ರೊಮ್ಯಾನ್ಸ್‌, ನೆಂಟರಿಸ್ಟರ ಮನೆಗೆ ಭೇಟಿ ಇತ್ಯಾದಿ ಎಲ್ಲ ಹೇಳಬಹುದು.

ಆದರೆ ಮದ್ವೆ ಆದ ಮೇಲೆ ವಾಟ್‌ ಈಸ್‌ ನೆಕ್ಸ್ಟ್ ಅನ್ನೋದರ ಬಗ್ಗೆ ಸಮೀಕ್ಷೆ ನಡೆದಿದ್ದು ಅಚ್ಚರಿಯ ಫ‌ಲಿತಾಂಶ ಬಂದಿದೆ. ಈಗಿನ ಜಮಾನಾದಲ್ಲಿ ಮದ್ವೆ ಆದವರು ಕೂಡಲೇ ಮಾಡುವ ಕೆಲಸ
ಅಂದ್ರೆ ನಂಗೆ ಮದ್ವೆ ಆಯ್ತು ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸುತ್ತಾರಂತೆ. ಅದ್ರಲ್ಲೂ ಶೇ.78ರಷ್ಟು ಮಂದಿ ಫೇಸ್‌ಬುಕ್‌ನಲ್ಲಿ ಮದ್ವೆ ಆಯ್ತು ಅಂತಾ ಫೋಸ್ಟ್‌ ಮಾಡಿ ಮದ್ವೆಯ ಫೋಟೋಗಳನ್ನು ಹಾಕಿ ಸಂಭ್ರಮಿಸುತ್ತಾರಂತೆ. ಇದರೊಂದಿಗೆ ಶೇ.64ರಷ್ಟು ಮಂದಿ ನಾವು ಇಬ್ಬರೇ
ಹೊರಗಡೆ ಸುತ್ತಾಟಕ್ಕೆ ಹೋಗುತ್ತೇವೆ ಎಂದು ಹೇಳಿದ್ದೇವೆ. ಶೇ.50ರಷ್ಟು ಮಂದಿ ಮತ್ತೂಂದು ಭರ್ಜರಿ ಪಾರ್ಟಿ ಆಯೋಜನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಹೀಗೆ ಹೇಳಿದವರೆಲ್ಲ ಫೇಸ್‌ಬುಕ್‌ನಲ್ಲಿ ಪೋಸ್ಟ್‌
ಹಾಕದೇ ಇರುವುದಿಲ್ಲ ಎಂಬುದು ಗಮನಾರ್ಹ ಸಂಗತಿ. ಮದ್ವೆಗೂ ಫೇಸ್‌ಬುಕ್‌ಗೂ ಅಷ್ಟರ ಮಟ್ಟಿಗೆ ನಂಟಿದೆ ಎಂದು ಸಮೀಕ್ಷೆ ಹೇಳಿದೆ.

ಫ‌ಲಿತಗಳು…

ಮದ್ವೆ ಆದ ಕೂಡಲೇ ಮೊದಲು ಮಾಡುವ ಕೆಲಸ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕೋದು!

ಶೇ.78ರಷ್ಟು ಮಂದಿ ಫೇಸ್‌ಬುಕ್‌ನಲ್ಲಿ ಫೋಟೋ, ಪೋಸ್ಟ್‌ ಅಪ್ಲೋಡ್‌ ಮಾಡ್ತಾರೆ

ಮದ್ವೆಗೂ-ಫೇಸ್‌ ಬುಕ್‌ಗೂ ಭಾರೀ ನಂಟು: ಸಮೀಕ್ಷೆಯಲ್ಲಿ ಬಹಿರಂಗ!
-ಉದಯವಾಣಿ

Write A Comment