ಅಂತರಾಷ್ಟ್ರೀಯ

ಇಡೀ ಏಷ್ಯ ಒಂದಾದರೆ ಭಯೋತ್ಪಾದನೆಯಂಥ ಸವಾಲುಗಳನ್ನು ದಮನಿಸಬಹುದು: ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

Modi in Asansol

ಸಿಯೋಲ್, ಮೇ 19: ಇಡೀ ಏಷ್ಯಾ ರಾಷ್ಟ್ರಗಳು ಏಕಮುಖವಾಗಿ ಮುನ್ನಡೆದರೆ ಈ ಖಂಡದ ಹಿನ್ನಡೆಗೆ ಕಾರಣವಾಗುತ್ತಿರುವ ಭಯೋತ್ಪಾದನೆಯಂಥ ಸವಾಲುಗಳನ್ನು ಪರಿಣಾಮಕಾರಿಯಾಗಿ ದಮನಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದಕ್ಷಿಣ ಕೊರಿಯಾದ ರಾಜಧಾನಿಯಾದ ಇಲ್ಲಿ ಇಂದು ನಡೆದ ಏಷಿಯಾ ಲೀಡರ್‌ಷಿಪ್ ಫೋರಂ (ಏಷಿಯಾ ನಾಯಕರ ವೇದಿಕೆ) ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಏಷ್ಯಾ ರಾಷ್ಟ್ರಗಳು ಒಂದಾಗಿ ಎದ್ದು ನಿಂತರೆ, ಕೆಲವೇ ಸಮಯದಲ್ಲಿ ಅಭಿವೃದ್ಧಿ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಪ್ರತಿಸ್ಪರ್ಧಿಗಳು ನಮ್ಮನ್ನು ಮುಂದುವರಿಯಲು ಬಿಡದೆ ಹಿಂದೆ ತಳ್ಳುತ್ತಾರೆ. ಆದರೆ ಇಡೀ ಈ ಪ್ರಾಂತ್ಯದ ದೇಶಗಳು ಏಕಮುಖವಾಗಿ ಸಾಗಿದರೆ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಯೋತ್ಪಾದನೆ ಸವಾಲು ಈಗ ಬೃಹದಾಕಾರವಾಗಿ ಬೆಳೆಯುತ್ತಿದ್ದು, ಅದನ್ನು ದಮನಿಸಲು ಒಗ್ಗಟ್ಟು ಅಗತ್ಯವಾಗಿದೆ ಎಂದು ಹೇಳಿದರು.

ಪಶ್ಚಿಮ ಏಷ್ಯಾದಲ್ಲಿ ಏನೇ ನಡೆದರೂ ಅದು ಪೂರ್ವ ಏಷ್ಯಾದ ಮೇಲೆ ಗಾಢ ಪ್ರಭಾವ ಬೀರುತ್ತದೆ. ಅದೇ ರೀತಿ ಸಾಗರದ ಮೇಲೆ ನಡೆಯುವ ಕ್ರಿಯೆಗಳು ಭೂಮಿಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಈ ಭಾಗದಲ್ಲಿ ಮನೆ ಮಾಡುತ್ತಿರುವ ಅಶಾಂತಿಯನ್ನು ಅಳಿಸಿ ಶಾಂತಿ ಸ್ಥಾಪಿಸಲು ಈ ಒಗ್ಗಟ್ಟು ಅಗತ್ಯ ಮತ್ತು ಅನಿವಾರ್ಯ ಎಂದು ಮೋದಿ ಹೇಳಿದರು. ಈ ಸಮಾವೇಶದಲ್ಲಿ ದಕ್ಷಿಣ ಕೊರಿಯ ಅಧ್ಯಕ್ಷ ಪಾರ್ಕ್‌ಗ್ಯೂನ್ ಹೈ, ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್ ಉಪಸ್ಥಿತರಿದ್ದರು. ಭಾರತ ದೇಶವು ಈಗ ವಿಶ್ವದ ದೃಷ್ಟಿಯಲ್ಲಿ ಅತ್ಯಂತ ಪ್ರಬಲ ಆರ್ಥಿಕ ಅಭಿವೃದ್ಧಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಡೀ ಜಗತ್ತು ಭಾರತದತ್ತ ನೋಡುತ್ತಿದೆ ಎಂದು ಮೋದಿ ತಿಳಿಸಿದರು.

ಇದಕ್ಕೂ ಮುನ್ನ ಸಿ ಇ ಬಳಗ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಭಾರತದ ಮೇಕ್ ಇನ್ ಇಂಡಿಯಾ ಮಂತ್ರವನ್ನು ಸಾಕಾರಗೊಳಿಸಲು ಏಷ್ಯಾ ರಾಷ್ಟ್ರಗಳ ಸಹಕಾರದ ಅಗತ್ಯವಿದೆ ಎಂದು ಹೇಳಿದರು. ಅದಕ್ಕಾಗಿ ನಮ್ಮ ಸರ್ಕಾರ ಉದ್ಯಮಗಳಿಗೆ ಸ್ಥಿರತೆ, ಸರಳ ತೆರಿಗೆ ಹಾಗೂ ಇತರ ಮೂಲ ಸೌಲಭ್ಯಗಳನ್ನು ಒದಗಿಸಿ ಮೇಕ್ ಇನ್ ಇಂಡಿಯಾ ಹಾದಿಯನ್ನು ಸುಗಮ ಗೊಳಿಸಲಾಗುವುದು ಎಂದು ಮೋದಿ ದಕ್ಷಿಣ ಕೋರಿಯಾ ಸಿ ಇ ಬಳಗ ಸಭೆಗೆ ಭರವಸೆ ನೀಡಿದರು. ವಿದೇಶಿ ನೇರ ಬಂಡವಾಳ ಹೂಡಿಕೆ ಭಾರತದಲ್ಲಿ ಅನಿವಾರ್ಯ. ಇದರೊಂದಿಗೆ ಉದ್ಯಮಿ ಸ್ನೇಹಿಯಾದ ಇನ್ನೂ ಹಲವು ಕ್ರಮಗಳನ್ನು ಭಾರತ ಕೈಗೊಳ್ಳಲಿದೆ ಎಂದು ಹೇಳಿದರು.

Write A Comment