ರಾಷ್ಟ್ರೀಯ

ಮೋದಿ ಯೋಜನೆಗೆ ದ.ಕೊರಿಯಾ 10 ಶತಕೋಟಿ ಡಾಲರ್ ನಿಧಿ

Pinterest LinkedIn Tumblr

Modi-in-South

ನವದೆಹಲಿ, ಮೇ 18: ಬುಲೆಟ್ ಟ್ರೈನ್‌ನಿಂದ ಹಿಡಿದು ಸ್ಮಾರ್ಟ್ ಸಿಟಿವರೆಗಿನ ಪ್ರಧಾನಿ ಮೋದಿಯವರ ಹಲವು ಮಹತ್ವಾಕಾಂಕ್ಷೆ ಯೋಜನೆಗಳ ಅನುಷ್ಠಾನಕ್ಕೆ ಬೆಂಬಲವಾಗಿ 10 ಶತಕೋಟಿ ಡಾಲರ್ ಮೊತ್ತದ ನಿಧಿಯೊಂದನ್ನು ಸ್ಥಾಪಿಸುವುದಾಗಿ ಭಾರತದಲ್ಲಿರುವ ದಕ್ಷಿಣ ಕೊರಿಯ ರಾಯಭಾರಿ ಜೂನ್ ಗ್ಯೂ ಲೀ ಹೇಳಿದ್ದಾರೆ.

ನನ್ನ ದೇಶವು ಭಾರತಕ್ಕೆ ಒಟ್ಟು 10 ಶತಕೋಟಿ ಡಾಲರ್ ಪ್ಯಾಕೇಜ್ ನೀಡಲು ಮುಂದಾಗಿದ್ದು, ಅದರಲ್ಲಿ ಆರ್ಥಿಕ ಅಭಿವೃದ್ಧಿ ಸಹಕಾರ ನಿಧಿ 1 ಶತಕೋಟಿ ಡಾಲರ್ ಸಮ್ಮಿಳಿತಗೊಂಡಿರುತ್ತದೆ ಎಂದು ಲೀ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

Write A Comment