ರಾಷ್ಟ್ರೀಯ

ಅರೆ ಬೆತ್ತಲೆ ನೃತ್ಯ ಮಾಡುತ್ತಿದ್ದ ಯುವತಿಯರ ಅರೆಸ್ಟ್

Pinterest LinkedIn Tumblr

6337maxresdefault

ಹೈದರಾಬಾದ್: ವಾರಾಂತ್ಯವಾದ ಶನಿವಾರ ರಾತ್ರಿ ರೇವ್ ಪಾರ್ಟಿ ನಡೆಸುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿರುವ ಪೊಲೀಸರು ಎಂಟು ಮಂದಿ ಯುವತಿಯರೂ ಸೇರಿದಂತೆ ಒಟ್ಟು ಇಪ್ಪತ್ಮೂರು ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಹೈದರಾಬಾದ್ ಹೊರ ವಲಯದ ಶಮೀರ್ ಪೇಟ್ ನಲ್ಲಿನ ಗೆಸ್ಟ್ ಹೌಸ್ ಒಂದರಲ್ಲಿ ಈ ಪಾರ್ಟಿ ನಡೆಯುತ್ತಿದ್ದು, ಯುವತಿಯರು ಪಾರ್ಟಿಯಲ್ಲಿ ಅರೆ ಬೆತ್ತಲೆ ನೃತ್ಯ ನಡೆಸುತ್ತಿದ್ದರೆಂದು ಹೇಳಲಾಗಿದೆ. ತಮಗೆ ದೊರೆತ ಖಚಿತ ಮಾಹಿತಿ ಮೇರೆಗೆ ಗೆಸ್ಟ್ ಹೌಸ್ ಮೇಲೆ ದಾಳಿ ನಡೆಸಿದ ಪೊಲೀಸರು ಯುವತಿಯರೂ ಸೇರಿದಂತೆ ಒಟ್ಟು 23 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಸಿಕ್ಕಿ ಬಿದ್ದವರ ಪೈಕಿ ಮುಂಬೈನಿಂದ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವಕರೂ ಸೇರಿದ್ದು, ಸೋಮಾಲಿಯಾ ಹಾಗೂ ಮಂಗೋಲಿಯಾ ದೇಶದ ಪ್ರಜೆಗಳೂ ಈ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರೆಂದು ಹೇಳಲಾಗಿದೆ. ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲಿ ಬೆಲೆ ಬಾಳುವ ವಿದೇಶಿ ಮದ್ಯ ಹಾಗೂ ಡ್ರಗ್ಸ್ ಸಹ ಪೊಲೀಸರಿಗೆ ಲಭಿಸಿದೆಯೆಂದು ಮಾಹಿತಿ ತಿಳಿದುಬಂದಿದೆ.

Write A Comment