ಅಂತರಾಷ್ಟ್ರೀಯ

ಕೋಳಿ ಮೊಟ್ಟೆಯಲ್ಲಿದೆ ಸೌಂದರ್ಯದ ಗುಟ್ಟು; ಮೊಟ್ಟೆ ಸೇವಿಸುವುದರಿಂದ ದೇಹದ ತೂಕವನ್ನು ಇಳಿಸಬಹುದು

Pinterest LinkedIn Tumblr

egg2

‘ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ’ ಇದು ಪ್ರಸಿದ್ದ ಜಾಹಿರಾತು. ಆದ್ರೆ ಮೊಟ್ಟೆ ಕೇವಲ ನಿಮ್ಮ ಹೊಟ್ಟೆಯನ್ನು ಮಾತ್ರ ತುಂಬಿಸುವುದಿಲ್ಲ. ಬದಲಿಗೆ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಎನ್ನುತ್ತವೆ ಸಂಶೋಧನೆಗಳು. ಹೌದು, ದಿನಕ್ಕೆ ಒಂದು ಮೊಟ್ಟೆ ಸೇವಿಸುವುದರಿಂದ ಆ ವ್ಯಕ್ತಿಯ ಹೃದಯ ಆರೋಗ್ಯಕರವಾಗಿರುತ್ತದೆ.

ಎಂಬುದು ಸಂಶೋಧನಾ ವರದಿಯ ಫಲಿತಾಂಶ. ಮೊಟ್ಟೆಯ ಹಳದಿ ಲೋಳೆ ಎನ್ನುವುದು ಮೊಟ್ಟೆಯ ಭಾಗವಾಗಿದ್ದು, ಇದು ಬೆಳವಣಿಗೆಯ ಭ್ರೂಣಕ್ಕೆ ಆಹಾರ ಒದಗಿಸುತ್ತದೆ. ಅಂಕುರಾವಸ್ಥೆಯ ಚಪ್ಪಟೆಯ ಭಾಗ ದೊಂದಿಗೆ ಹಳದಿ ಲೋಳೆಯು ಏಕೈಕ ಕೋಶ ವಾಗಿರುತ್ತದೆ; ಬರಿಗಣ್ಣಿನಿಂದ ನೋಡಬಹುದಾದ ಕೆಲವೇ ಏಕ ಕೋಶಗಳಲ್ಲಿ ಒಂದಾಗಿದೆ. ಆಹಾರವಾಗಿ, ಹಳದಿ ಲೋಳೆಯು ವಿಟಮಿನ್‍ಗಳು ಮತ್ತು ಖನಿಜಗಳ ಮುಖ್ಯ ಮೂಲವಾಗಿದೆ. ಅವುಗಳು ಮೊಟ್ಟೆಯ ಎಲ್ಲಾ ಕೊಬ್ಬು ಮತ್ತು ಕೊಲೆಸ್ಟರಾಲï ಅನ್ನು ಮತ್ತು ಐದನೇ ಒಂದು ಭಾಗದಷ್ಟು ಪೆÇ್ರಟೀನ್ ಒಳಗೊಂಡಿರುತ್ತದೆ.

ಹಳದಿ ಲೋಳೆಯು ಮೊಟ್ಟೆಯ ದ್ರವಭಾಗದ ತೂಕದ ಸುಮಾರು 33% ಭಾಗವಾಗಿರುತ್ತದೆ; ಇದು ಮೊಟ್ಟೆಯ ಬಿಳಿಭಾಗದ ಕ್ಯಾಲೊರಿ ಪ್ರಮಾಣದ ಮೂರರಷ್ಟು ಅಂದರೆ ಸುಮಾರು 60 ಕ್ಯಾಲೊರಿಗಳನ್ನು ಒಳಗೊಂಡಿರುತ್ತದೆ. ಒಂದು ದೊಡ್ಡ ಮೊಟ್ಟೆಯು (50 ಗ್ರಾಂ ಒಟ್ಟು, 17 ಗ್ರಾಂ ಹಳದಿ ಲೋಳೆ) ಸುಮಾರು 2.7 ಗ್ರಾಂ ಪೆÇ್ರಟೀನ್, 210 ಮಿಗ್ರಾಂ ಕೊಲೆಸ್ಟರಾಲï, 0.61 ಗ್ರಾಂ ಕಾರ್ಬೋಹೈಡ್ರೇಟ್‍ಗಳು ಮತ್ತು ಒಟ್ಟು 4.51 ಗ್ರಾಂ ಕೊಬ್ಬನ್ನು ಒಳಗೊಂಡಿರುತ್ತದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಸೇವನೆ ಅನಿವಾರ್ಯ, ಜೊತೆಗೆ ಎಷ್ಟು? ಯಾವಾಗ? ಹೇಗೆ? ಏನನ್ನು ಸೇವಿಸಬೇಕು ಎಂಬ ವಿಷಯಗಳಲ್ಲಿ ಜಾಗ್ರತೆವಹಿಸಿದರೆ ದೇಹವನ್ನು ರೋಗಗಳಿಂದ ದೂರವಿಡಬಹುದು. ಪ್ರೋಟೀನ್‍ಗಳ ಆಗರವಾಗಿರುವ ಮೊಟ್ಟೆಗಳು ವಿಟಮಿನ್‍ಗಳನ್ನು ಹೊಂದಿರುವ ಸ್ವಾಭಾವಿಕ ಆಗರಗಳಾಗಿವೆ. ಇತ್ತೀಚೆಗೆ ಒಂದು ಸಮೀಕ್ಷೆಯ ಪ್ರಕಾರ ವಿಶ್ವದಲ್ಲೇ ಮೊಟ್ಟೆ ಬಳಕೆಯ ಪ್ರಮಾಣ ಹೆಚ್ಚಾಗಿದೆಯಂತೆ. ಇದಕ್ಕೆ ಕಾರಣ ಅದರ ಆರೋಗ್ಯಕರ ಗುಣ ಮತ್ತು ರುಚಿ. ದಿನಕ್ಕೊಂದು ಮೊಟ್ಟೆ ಸೇವನೆಯಿಂದ ದೇಹದ ಆರೋಗ್ಯಕ್ಕೆ ಅನೇಕ ಲಾಭಗಳಿವೆ.

ಒಂದೊಂದುಸಲ ದೇಹದ ತೂಕ ಇಳಿಸುವುದೇ ಬದುಕಿನ ಗುರಿ ಅಂದುಕೊಳ್ಳುತ್ತೀರ. ಅದಕ್ಕಾಗಿ ಅದೆಷ್ಟು ಪರದಾಟ ಪಡುತ್ತೀರ ಅಂದರೆ ತೂಕ ಇಳಿಸಲು ಇರುವ ನೂರಾರು ದಾರಿಗಳನ್ನು ಸುತ್ತಿ ಬರುತ್ತೀರ. ಆದರೆ ನಿರೀಕ್ಷಿಸಿದ ಫಲಿತಾಂಶ ಮಾತ್ರ ಸಿಗುವುದೇ ಇಲ್ಲ. ಇನ್ನು ಮೊಟ್ಟೆ ಸೇವಿಸಿ. ಆಗ ನೋಡಿ ನೀವು ಅಂದುಕೊಂಡಿದ್ದು ನೆರವೇರಬಹುದು.

ಬೆಳಗ್ಗೆ ಬ್ರೇಕ್‍ಫಾಸ್ಟ್ ಗೆ ಮೊಟ್ಟೆ ಸೇವಿಸುವುದರಿಂದ ದೇಹದ ತೂಕವನ್ನು ಇಳಿಸಬಹುದು ಎಂದು ಇತ್ತೀಚಿನ ಸಂಶೋಧನೆ ತಿಳಿಸಿದೆ. ಮೊಟ್ಟೆ ಸೇವನೆಯಿಂದ ದಿನವಿಡೀ ಹಸಿವು ಕಡಿಮೆಯಾಗುವುದು. ಇದರಿಂದ ಮಧ್ಯದಲ್ಲಿ ಬಿಸ್ಕಿಟï, ಚಿಪ್ಸ್ ಇತರ ಜಂಕ್ ಫೂಡ್‍ಗಳನ್ನು ತಿನ್ನುವುದು ತಪ್ಪಿಸಬಹುದು. ಇದರಿಂದ ಇತರೇ ಆರೋಗ್ಯ ಸಮಸ್ಯೆಗಳಿಂದಲೂ ಪಾರಾಗಬಹುದು. ಹೆಚ್ಚಿನ ಪೆÇ್ರೀಟೀನ್ ಇರುವ ಅಂಶ ಇದರಲ್ಲಿ ಇರುವುದರಿಂದ ಆಗಾಗ ಹಸಿವು ಆಗುವುದಿಲ್ಲ. ಇದರಲ್ಲಿರುವ ಕಾರ್ಬೊಹೈಡ್ರೇಟ್ ಕೊಬ್ಬಿನ ಅಂಶವನ್ನು ಹೆಚ್ಚಾಗಿ ಸೇವಿಸಿದರೆ ಉತ್ತಮ. ದಿನಕ್ಕೆ 4 ಮೊಟ್ಟೆ ಸೇವಿಸಬಹುದು. ಮೊಟ್ಟೆಯಬಿಳಿ ಭಾಗವನ್ನು ಹೆಚ್ಚಾಗಿ ಸೇವಿಸ ಬಹುದು. ಮೊಟ್ಟೆಯ ಹಳದಿ ಭಾಗವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಅದರಲ್ಲಿ ವಿಟಮಿನ್ ಡಿ ಅಂಶ ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆಯ ಬಿಳಿ ಭಾಗದಲ್ಲಿ ಪ್ರೋಟೀನ್ ಅಧಿಕವಿರುತ್ತದೆ.

ದಿನದಲ್ಲಿ ಒಂದು ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರು, ಫಿಟ್‍ನೆಸ್ ಪರಿಣಿತರು ಹೇಳುತ್ತಾರೆ. ಅದೇ ಮೊಟ್ಟೆಯನ್ನು ಬೆಳಗಿನ ಬ್ರೇಕ್‍ಫಾಸ್ಟ್‍ಗೆ ತಿಂದರೆ ಇನ್ನಷ್ಟು ಪ್ರಯೋಜನ ಪಡೆಯಬಹುದು.

ಜಿವಕೊಶಗಳ ಬೆಳವಣಿಗೆಯಲ್ಲಿ ನೆರವಾಗುವ ಒಮೆಗಾ -3 ಮತ್ತು ಒಮೆಗಾ -6 ರಿತಿಯ ಡಯಟರಿ ಫ್ಯಾಟ್‍ಗಳು ಮೊಟ್ಟೆಯಲ್ಲಿವೆ. ಕಠಿಣ ತಾಲೀಮಿನ ನಂತರ ಹಾನಿಗೊಳಗಾದ ಮಾಂಸಖಂಡಗಳನ್ನು ದುರಸ್ತಿ ಮಾಡುವಲ್ಲಿ ಮೊಟ್ಟೆ ಪ್ರಮುಖ ಪಾತ್ರ ವಹಿಸುತ್ತದೆ. ಹಲವರು ಮೊಟ್ಟೆಯಲ್ಲಿ ಕೊಲೆಸ್ಟರಾಲï ಇದೆ ಎಂದು ಅದನ್ನು ತಿನ್ನುವುದಿಲ್ಲ. ಆದರೆ, ಮೊಟ್ಟೆಯ ಹಳದಿ ಭಾಗ ಉತ್ತಮ ಕೊಲೆಸ್ಟರಾಲï ಹೊಂದಿದ್ದು, ಉತ್ತಮ ದೇಹರ್ದಾಢÀ್ರ್ಯ ಹೊಂದುವುದು ನಿಮ್ಮ ಗುರಿಯಾದರೆ, ನಿಮ್ಮ ಆಹಾರದಲ್ಲಿ ಮೊಟ್ಟೆ ಸೇರಿರಲೇಬೇಕು.

* ಹೇರ್ ಡ್ಯಾಮೇಜ್ ತಡೆಯುತ್ತೆ ಮೊಟ್ಟೆ
ಕೂದಲು ಉದುರುವಿಕೆ, ಸೇರಿದಂತೆ ಅನೇಕೆ ಕೂದಲು ಸಮಸ್ಯೆಗಳಿಗೆ ಮೊಟ್ಟೆಯಿಂದ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು. ಪ್ರೋಟೀನ್ ಹಾಗೂ ವಿಟಮಿನ್‍ಯುಕ್ತ ಮೊಟ್ಟೆ ಕೂದಲುಗಳ ಬೆಳವಣಿಗೆ, ಕೂದಲುದುರುವಿಕೆ ಹಾಗೂ ತೆಲುಕೂದಲು ತೋದರೆಗಳಿಗೆ ಮೊಟ್ಟೆ ಮತ್ತು ಆಲಿವ್ ಆಯಿಲ್ ಮಿಶ್ರಣವನ್ನು ತಲೆಗೂದಲಿಗೆ ಲೇಪಿಸಿ 15-20 ನಿಮಿಷಗಳ ಕಾಲ ಬಿಟ್ಟು ಉಗುರು ಬೆಚ್ಚಿಗಿನ ನೀರಿನೊಂದಿಗೆ ತೊಳೆಯುವುದರಿಂದ ಕೃತಕ ಶಾಂಪೂಗಳಿಗಿಂತಲು ಹೆಚ್ಚು ಪರಿಣಾಮಕಾರಿಯಾಗಿ ಕೂದಲುಗಳ ರಕ್ಷಣೆ ಮಾಡಿಕೊಳ್ಳಬಹುದು.

* ಕೋಳಿ ಮೊಟ್ಟೆಯೊಳಗಿದೆ ನಿಮ್ಮ ಸೌಂದರ್ಯದ ರಹಸ್ಯ
ಕೋಳಿಮೊಟ್ಟೆಯೂ ಕೂಡಾ ಚರ್ಮಕ್ಕೆ ಟಾನಿಕ್ ಇದ್ದಂತೆ ಎಂಬ ವಿಷಯ ನಿಮಗೆ ಗೊತ್ತೇ? ಹೌದು. ಇದು ಅಕ್ಷರಶಃ ಕೋಳಿಮೊಟ್ಟೆಯು ಎಣ್ಣೆ ಹಾಗೂ ಮಿಶ್ರ ಚರ್ಮವಿದ್ದವರಿಗೆ ಸೂಕ್ತ ಟಾನಿಕ್. ಮೊಟ್ಟೆಯ ಬಿಳಿಯ ಲೋಳೆ ಹಾಗೂ ಹಳದಿ ಲೋಳೆ ಎರಡೂ ಕೂಡಾ ಚರ್ಮವನ್ನು ನುಣುಪಾಗಿಸುತ್ತದೆ. ಮೊಡವೆ ಹಾಗೂ ಮೊಡವೆಗಳಿಂದಾಗಿರುವ ಕಲೆಗಳ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಸೂಕ್ತ ಹಾಗೂ ಸುಲಭ ಸಾಧನ ಕೂಡಾ. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಸೌಂದರ್ಯ ಕಾಳಜಿಯಿದು.

* ನೆನಪಿಟ್ಟುಕೊಳ್ಳಿ..
ಇಷ್ಟೆಲ್ಲ ಮಹತ್ವದ ಗುಣ ಹೊಂದಿರುವ ಮೊಟ್ಟೆಗಳನ್ನು ಖರೀದಿಸುವಾಗ ಹಾಗೂ ಸೇವಿಸುವಾಗ ಎಚ್ಚರಿಕೆಯಿಂದರಬೇಕಾದುದು ಅಷ್ಟೇ ಮುಖ್ಯ. ಈ ಕೆಳಗಿನ ಕೆಲವು ಸಲಹೆಗಳನ್ನು ಅನುಸರಿಸಿ ಮತ್ತು ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಮೊಟ್ಟೆಗಳ ಕೆಟ್ಟ ಬ್ಯಾಕ್ಟೀರಿಯಾ ಹಾಗೂ ರೋಗ-ರುಜಿನಗಳಿಗೆ ಈಡಾಗಬಹುದಾದ ಅಪಾಯಗಳನ್ನು ಕಡಿಮೆ ಮಾಡಿಕೊಳ್ಳಿ.

1. ಒಡೆದು ಹೋದ ಅಥವಾ ಬಿರುಕುಬಿಟ್ಟ, ಕೊಳಕು ಮೊಟ್ಟೆಗಳನ್ನು ಸೇವಿಸಬೇಡಿ: ಇದರಿಂದ ಕೋಶದ ಹೊರಭಾಗದಲ್ಲಿ ಕೊಳಕು ಅಥವಾ ಕೋಳಿ ಹಿಕ್ಕೆಗಳ ಬ್ಯಾಕ್ಟೀರಿಯಾ ಬಿರುಕುಗಳ ಮೂಲಕ ಮೊಟ್ಟೆಯ ಒಳಗೆ ಹೋಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಒಂದು ಬಾರಿ ಹೀಗೆ ಮೊಟ್ಟೆಯ ಒಳಗೆ ಬ್ಯಾಕ್ಟೀರಿಯಾಗಳು ಬೆಳೆದರೆ, ಅವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಬಿರುಕು ಬಿಟ್ಟ ಮೊಟ್ಟೆಗಳನ್ನು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುವ ಬದಲು ಅಂತಹ ಮೊಟ್ಟೆಗಳನ್ನು ಎಸೆಯುವುದೇ ವಾಸಿ.

2. ಕೊನೆಯ ದಿನಾಂಕ ಪರಿಶೀಲಿಸಿ: ಎಲ್ಲೆಲ್ಲಿಂದಲೋ ಮೊಟ್ಟೆಗಳನ್ನು ಖರೀದಿ ಮಾಡಿದಾಗ ಅವುಗಳ ಕೊನೆಯ ದಿನಾಂಕವನ್ನು ಗುರುತಿಸುವುದೇ ಕಷ್ಟ. ಹೀಗೆ ಎಲ್ಲೆಂದರೆ ಅಲ್ಲಿಂದ ಮೊಟ್ಟೆಗಳನ್ನು ತಂದಾಗ ಅವುಗಳನ್ನು ಎಲ್ಲಿಂದ, ಯಾವಾಗ ತರಲಾಗಿದೆ, ಹೇಗೆ ಸಂಗ್ರಹಿಸಲಾಗಿದೆ ಎನ್ನುವುದು ತಿಳಿಯುವುದಿಲ್ಲ. ಆದ್ದರಿಂದ ಪ್ಯಾಕ್ ಮಾಡಲಾದ ಮೊಟ್ಟೆಗಳನ್ನು ತರುವುದರಿಂದ ಇಂತಹ ಕೆಲವು ಸಂಗತಿಗಳನ್ನು ಪರಿಶೀಲಿಸಬಹುದು.

3. ಮೊಟ್ಟೆಯ ತಾಜಾತನವನ್ನು ಹೀಗೆ ಪರೀಕ್ಷಿಸಿ: ತಣ್ಣೀರಿನ ಪಾತ್ರೆಯಲ್ಲಿ ಮೊಟ್ಟೆಗಳನ್ನು ಇರಿಸಿ. ಒಂದು ವೇಳೆ ಮೊಟ್ಟೆ ಪಾತ್ರೆಯ ಕೆಳಗೆ ಜರುಗುತ್ತ ಹೋಗಿ ಮುಳುಗಿದರೆ, ಅದು ತಾಜಾ ಇದೆ ಎಂದು ಅರ್ಥ. ಅದು ಮುಳುಗುತ್ತ ಹೋಗಿ ಮತ್ತೆ ಪಾತ್ರೆ ಕೆಳಗಿನಿಂದ ಬಂದು ನಿಂತರೆ ಅದು ಅಷ್ಟೊಂದು ತಾಜಾ ಆಗಿಲ್ಲ, ಆದಾಗ್ಯೂ ಸೇವಿಸಲು ಅರ್ಹ ಎಂದು ತಿಳಿದುಕೊಳ್ಳಬಹುದು. ಆದರೆ ಮೊಟ್ಟೆ ಮೇಲ್ಮೈ ಮೇಲೇ ತೇಲುತ್ತ ನಿಂತರೆ ಅದನ್ನು ಎಸೆಯಬೇಕು.

4. ಮೊಟ್ಟೆಗಳನ್ನು ಸರಿಯಾಗಿ ಸಂಗ್ರಹಿಸಿಡಿ: ಮೊಟ್ಟೆಗಳನ್ನು ಮನೆಯಲ್ಲಿ ರೆಫ್ರಿಜರೇಟರ್‍ನ ಒಳಗಿನ ಶೆಲ್ಫ್ (40 ಡಿಗ್ರಿ)ನಲ್ಲಿ ಅವುಗಳ ಮೂಲ ಪೆಟ್ಟಿಗೆಯಲ್ಲಿಯೇ ಸಂಗ್ರಹಿಸಿಡಿ. ಮನೆಗೆ ತಂದ 5 ವಾರಗಳ ಒಳಗೆ ಅವುಗಳನ್ನು ಬಳಸಿ ಬಿಡುವುದು ಉತ್ತಮ.

6. ಸರಿಯಾಗಿ ಬೇಯಿಸಿ: ಮೊಟ್ಟೆಗಳನ್ನು ಸರಿಯಾದ ರೀತಿಯಲ್ಲಿ ಬೇಯಿಸುವುದು ಬಹಳ ಮುಖ್ಯ. ಏಕೆಂದರೆ ಸರಿಯಾಗಿ ಬೇಯಿಸದ ಮೊಟ್ಟೆಗಳನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ. ಎಲ್ಲಾ ಕಡೆ ಸರಿಯಾದ ರೀತಿಯಲ್ಲಿ ಬೇಯುವ ಹಾಗೆ ಮೊಟ್ಟೆಗಳನ್ನು ಸರಿಯಾಗಿ ಬೇಯಿಸಿಕೊಳ್ಳಬೇಕು. ಮೊಟ್ಟೆಗಳನ್ನು ಸೂಕ್ತ ರೀತಿಯಲ್ಲಿ ಬೇಯಿಸುವುದರಿಂದ ಅವುಗಳ ಒಳಗಿನ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

Write A Comment