ಅಂತರಾಷ್ಟ್ರೀಯ

ಪ್ರೀತಿ ಪಟೇಲ್ ಬ್ರಿಟನ್‌ನ ಉದ್ಯೋಗ ಸಚಿವೆ

Pinterest LinkedIn Tumblr

Priti-Patel

ಲಂಡನ್, ಮೇ 12: ಭಾರತೀಯ ಮೂಲದ ಸಂಸದೆ ಪ್ರೀತಿ ಪಟೇಲ್ ಅವರು ಬ್ರಿಟನ್‌ನ ಪ್ರಧಾನಿ ಡೇವಿಡ್ ಕ್ಯಾಮರೂನ್‌ರ ನೂತನ ಸಂಪುಟದಲ್ಲಿ ಉದ್ಯೋಗ ಸಚಿವೆಯಾಗಿ ನೇಮಕಗೊಂಡಿದ್ದಾರೆ.

ಕಳೆದ ವಾರ ಬ್ರಿಟನ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಾರ್ಟಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರೀತಿ ಪಟೇಲ್(43) ಒಟ್ಟು 47,339 ಮತಗಳಲ್ಲಿ ಶೇಕಡಾ 57.5ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದರು.

2014ರಲ್ಲಿ ನಡೆದ ಸಂಪುಟ ಬದಲಾವಣೆಯ ವೇಳೆ ಪ್ರೀತಿ ಪಟೇಲ್ ಅವರು ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.

2010ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್‌ನ ಎಸೆಕ್ಸ್ ಕೌಂಟಿ ಕ್ಷೇತ್ರದಿಂದ ಬ್ರಿಟನ್ ಸಂಸತ್ತಿಗೆ ಚುನಾಯಿತರಾಗಿದ್ದ ಪ್ರೀತಿ ಪಟೇಲ್ ಸಣ್ಣ ಉದ್ಯಮಗಳು, ಸಾರಿಗೆ ಮೂಲಸೌಲಭ್ಯ ಹೂಡಿಕೆ ಹಾಗೂ ಕಡಿಮೆ ವೆಚ್ಚದಲ್ಲಿ ಮನೆನಿರ್ಮಾಣ ಮೊದಲಾದ ಅಭಿಯಾನಗಳಿಗೆ ಉತ್ತೇಜನ ನೀಡುವಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದರು.

ಪ್ರೀತಿ ಪಟೇಲ್ ಅವರ ಹೆತ್ತವರು ನಾರ್‌ೆಕ್‌ನಲ್ಲಿ ಗ್ರಾಮೀಣ ಅಂಚೆಕಚೇರಿಯೊಂದನ್ನು ನಡೆಸುತ್ತಿದ್ದಾರೆ. ಲಂಡನ್ ಹಾರೊದಲ್ಲಿ ಜನಿಸಿರುವ ಪ್ರೀತಿ ಪಟೇಲ್ 2010ರ ಚುನಾವಣೆಯಲ್ಲಿ ಗೆಲುವು ಸಾಸುವ ಮೂಲಕ ಕನ್ಸರ್ವೇಟಿವ್ ಪಕ್ಷದ ಮೊದಲ ಏಶ್ಯನ್ ಮಹಿಳಾ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Write A Comment