ರಾಷ್ಟ್ರೀಯ

ಅಧಿಕೃತವಾಗಿ ಟ್ವಿಟ್ಟರ್ ಖಾತೆ ತೆರೆದ ರಾಹುಲ್ ಗಾಂಧಿ

Pinterest LinkedIn Tumblr

rahul-gandhi-joins-twitter

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲದಿದರಿಂದ ಬಂದಿದ್ದ ಟೀಕೆಗಳಿಗೆ ಉತ್ತರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಮಂಗಳವಾರ ತೆರೆದಿದ್ದಾರೆ. ಟಿಟ್ಟರ್ ಹ್ಯಾಂಡಲ್ ‘@officeofRG’ ಎಂದಿದೆ.

ಈ ಟ್ವಿಟ್ಟರ್ ಹ್ಯಾಂಡಲ್ ಅನ್ನು ಅವರ ಕಚೇರಿ ನಿರ್ವಹಿಸಲಿದ್ದು, ಅವರ ಕಾರ್ಯಕ್ರಮಗಳು ಮತ್ತಿತರ ಅಧಿಕೃತ ವಿಷಯಗಳನ್ನು ಬಿತ್ತರಿಸಲಿದೆ.

ಖಾತೆ ತೆರೆದ ಎರಡು ದಿನಗಳಲ್ಲಿ ಅಂದರೆ ಗುರುವಾರದ ಮಧ್ಯಾಹ್ನದ ಹೊತ್ತಿಗೆ ೨೨೦೦೦ ಜನ ರಾಹುಲ್ ಗಾಂಧಿ ಅವರನ್ನು ಟ್ವಿಟ್ಟರ್ ನಲ್ಲಿ ಅನುಸರಿಸುತ್ತಿದ್ದಾರೆ. “ರಾಹುಲ್ ಗಾಂಧಿ ಅವರ ಅಧಿಕೃತ ಕಾರ್ಯಕ್ರಮಗಳಿಗಾಗಿ ಈ ಜಾಗ ನೋಡುತ್ತಿರಿ” ಎಂದು ರಾಹುಲ್ ಮೊದಲ ಟ್ವೀಟ್ ಮಾಡಿದ್ದಾರೆ.

ಇದೂ ಅಲ್ಲದೆ ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ಐದು ಗ್ರಾಮಗಳಲ್ಲಿ ನಡೆಸುವ ಪಾದಯಾತ್ರೆ ಕಾರ್ಯಕ್ರಮವನ್ನು ಕೂಡ ಘೋಷಿಸಿದ್ದಾರೆ.

Write A Comment