ರಾಷ್ಟ್ರೀಯ

ಸಲ್ಮಾನ್ ಗಾಗಿ ಊಟ ತ್ಯಜಿಸಿದ ಜಂಟಿ ಸಹೋದರಿಯರು..!

Pinterest LinkedIn Tumblr

Conjoined twins attend news conference in New Delhi

ಪಾಟ್ನಾ: 13 ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದಿದ್ದ ಅಪಘಾತ ಪ್ರಕರಣದ ಸಂಬಂಧ ನ್ಯಾಯಾಲಯದಿಂದ 5 ವರ್ಷಗಳ ಕಾಲ ಶಿಕ್ಷೆಗೊಳಗಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗಾಗಿ ಅಭಿಮಾನಿಗಳು ಮರುಗುತ್ತಿದ್ದರೆ, ಜಂಟಿ ಸಹೋದರಿಯರಿಬ್ಬರು ಊಟವನ್ನೇ ತ್ಯಜಿಸಿ ದುಃಖಿಸುತ್ತಿದ್ದಾರೆ.

ಹುಟ್ಟಿದಾಗಿನಿಂದಲೇ ಎರಡು ತಲೆ ಒಂದೇ ದೇಹ ಹೊಂದಿರುವ ಪಾಟ್ನಾದ 19 ವರ್ಷದ ಫರ್ಹಾ ಮತ್ತು ಸಬಾ ಶಕೀಲ್ ಎಂಬ ಈ ಸಹೋದರಿಯರು ಸಲ್ಮಾನ್ ಖಾನ್ ಶಿಕ್ಷೆಗೊಳಗಾದ ಸುದ್ದಿ ತಿಳಿಯುತ್ತಿದ್ದಂತೆಯೇ ಕಣ್ಣೀರಿಟ್ಟಿದ್ದಾರಲ್ಲದೇ ಊಟವನ್ನು ಮಾಡಲು ನಿರಾಕರಿಸುತ್ತಿದ್ದಾರೆಂದು ಇವರುಗಳ ತಂದೆ ಶಕೀಲ್ ಅಹ್ಮದ್ ತಿಳಿಸಿದ್ದಾರೆ.

ಬಾಲ್ಯದಿಂದಲೂ ಸಲ್ಮಾನ್ ಖಾನ್ ಅಭಿಮಾನಿಗಳಾಗಿದ್ದ ಈ ಸಹೋದರಿಯರ ವಿಷಯ ತಿಳಿದ ಸಲ್ಮಾನ್ ‘ರಕ್ಷಾ ಬಂಧನ’ ದ ದಿನ ಇವರುಗಳನ್ನು ತಮ್ಮ ಮುಂಬೈ ಮನೆಗೆ ಕರೆಸಿಕೊಂಡು ರಾಖಿ ಕಟ್ಟಿಸಿಕೊಂಡಿದ್ದರಲ್ಲದೇ ಸಹೋದರಿಯರಿಗೆ ಕಾಣಿಕೆಯನ್ನೂ ನೀಡಿದ್ದರು. ಇದೀಗ ಸಲ್ಮಾನ್ ಶಿಕ್ಷೆಗೊಳಗಾದ ಸುದ್ದಿಯಿಂದ ಆಘಾತಗೊಂಡಿರುವ ಸಹೋದರಿಯರು ಊಟವನ್ನೇ ತ್ಯಜಿಸಿದ್ದಾರೆ.

Write A Comment