ರಾಷ್ಟ್ರೀಯ

ಭೂಕಂಪ ಸಂತ್ರಸ್ತರ ಹಣೆಗೆ ಪಟ್ಟಿ ಅಂಟಿಸಿದ ಆಸ್ಪತ್ರೆ: ಪಟ್ಟಿ ಅಂಟಿಸಿ ಅಮಾನವೀಯತೆ ತೋರಿದ ಆಸ್ಪತ್ರೆ ವೈದ್ಯರು

Pinterest LinkedIn Tumblr

bihar-earthquake-victim

ಪಾಟ್ನಾ: ಭೂಕಂಪ ಪೀಡಿತ ಸಂತ್ರಸ್ತರಿಗೆ ಬಿಹಾರದ ಖಾಸಗಿ ಆಸ್ಪತ್ರೆಯಲ್ಲಿ ಹಣೆ ಪಟ್ಟಿ ಅಂಟಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಬಿಹಾರದ ದರ್ಬಾಂಗ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಭೂಕಂಪನದಲ್ಲಿ ಗಾಯಗೊಂಡ ಗಾಯಾಳುಗಳ ಹಣೆ ಮೇಲೆ “ಭೂಕಂಪ ಪೀಡಿತರು” ಎಂಬ ಹಣೆಪಟ್ಟಿಯನ್ನು ಅಂಟಿಸಲಾಗುತ್ತಿದೆ. ಖಾಸಗಿ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು, ವರದಿ ಪ್ರಕಟವಾಗುತ್ತಿದ್ದಂತೆಯೇ ಆಸ್ಪತ್ರೆಯ ವೈದ್ಯರು ರೋಗಿಗಳ ಹಣೆಪಟ್ಟಿಯನ್ನು ತೆಗೆದು ಹಾಕಿದ್ದಾರೆ.

ಬಿಹಾರದಲ್ಲಿ ಭೂಕಂಪ ಪೀಡಿತರಿಗಾಗಿ ಅಲ್ಲಿನ ಸರ್ಕಾರ ವಿಶೇಷ ವಿಭಾಗಗಳನ್ನೇ ತೆರೆದಿದೆಯಾದರೂ, ಕೆಲ ಆಸ್ಪತ್ರೆಗಳು ಮಾತ್ರ ಅದೇಕೋ ಭೂಕಂಪ ಪೀಡಿತರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿವೆ. ಪ್ರಸ್ತುತ ಪ್ರಕರಣದಲ್ಲಿಯೂ ಭೂಕಂಪ ಪೀಡಿತರ ಹಣೆ ಮೇಲೆ ಹಣೆಪಟ್ಟಿ ಅಂಟಿಸುವ ಮೂಲಕ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಬಿಹಾರ ಸಚಿವ ಬೈಧ್ಯನಾಥ್ ಸಾಹ್ನಿ ಅವರು ಪ್ರಕರಣದ ಬಗ್ಗೆ ಆಸ್ಪತ್ರೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು. ಕೂಡಲೇ ರೋಗಿಗಳಿಗೆ ಅಂಟಿಸಿರುವ ಹಣೆಪಟ್ಟಿಯನ್ನು ತೆಗೆಯುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಈ ಹಣೆಪಟ್ಟಿ ಅಂಟಿಸುವಂತೆ ಯಾರು ಹೇಳಿದ್ದು ಮತ್ತು ಪ್ರಕರಣದ ಇತರೆ ಮಾಹಿತಿಗಳಿಗಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
-ಕೃಪೆ: ಕನ್ನಡ ಪ್ರಭ

Write A Comment