ರಾಷ್ಟ್ರೀಯ

ದಿನಗೂಲಿ ತಂದೆಯಿಂದ 25 ಸಾವಿರಕ್ಕೆ ಹೆಣ್ಣು ಮಗು ಮಾರಾಟ

Pinterest LinkedIn Tumblr

baby

ಜಾಲ್ ಪೈಗುರಿ: ಆಗ ತಾನೆ ಜನಿಸಿದ ತನ್ನ ಹೆಣ್ಣು ಮಗುವನ್ನು ದಿನಗೂಲಿ ನೌಕರನೊಬ್ಬ 25 ಸಾವಿರಕ್ಕೆ ಮಾರಾಟ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಜಾಲ್ ಪೈಗುರಿ ಜಿಲ್ಲೆಯಲ್ಲಿ ನಡೆದಿದೆ.

ದಿನಗೂಲಿ ನೌಕರ ಬುಲ್ ಬುಲ್ ಹಕ್ ಎಂಬುವನ ಪತ್ನಿ ಸಲ್ಮಾ ಬೇಗಂ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಳು. ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದಾಗ ಪತ್ನಿಯಿಂದ ಮಗುವನ್ನು ಕಸಿದ ಪತಿ, 25 ಸಾವಿರಕ್ಕೆ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದಾನೆ.

ಪತಿ ಬುಲ್ ಬುಲ್ ಹಕ್ ಬ್ರೋಕರ್ ಅತುಲ್ ಬಾಸಕ್ ಮುಖಾಂತರ ಪಾರ್ಥ ಬಿಸ್ವಾಸ್ ಎಂಬ ಶಿಕ್ಷಕನಿಗೆ ತನ್ನ ಮಗುವನ್ನು 25 ಸಾವಿರಕ್ಕೆ ಮಾರಾಟ ಮಾಡಿದ್ದಾನೆ.

ಇದರಿಂದ ಮನನೊಂದ ಸಲ್ಮಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಅನ್ವಯ ಪೊಲೀಸರು, ಬ್ರೋಕರ್ ಅತುಲ್ ಬಾಸಕ್ ಬಂಧಿಸಿದ್ದು ವಿಚಾರಣೆ ಕೈಗೊಂಡಿದ್ದಾರೆ.

ಬುಲ್ ಬುಲ್ ಹಕ್ ತಲೆಮರೆಸಿಕೊಂಡಿದ್ದು, ಮಗುವನ್ನು ಖರೀದಿಸಿದ ಶಿಕ್ಷಕ ಬಿಸ್ವಾಸ್ ಮಗುವಿನೊಂದಿಗೆ ಪರಾರಿಯಾಗಿದ್ದಾನೆ. ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಜಾಲ್ ಪೈಗುರಿ ಎಸ್ ಪಿ ರವೀಂದ್ರನಾಥ್ ತಿಳಿಸಿದ್ದಾರೆ.

Write A Comment