ರಾಷ್ಟ್ರೀಯ

ಬೆಂಗಳೂರು ಮಹಿಳೆಗೆ ಲೈಂಗಿಕ ಕಿರುಕುಳ: ದೆಹಲಿ ವಿಮಾನ ನಿಲ್ದಾಣದ ವಲಸೆ ಅಧಿಕಾರಿ ವಿನೋದ್ ಕುಮಾರ್ ಬಂಧನ

Pinterest LinkedIn Tumblr

vinod

ನವದೆಹಲಿ: ಬೆಂಗಳೂರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ದೆಹಲಿ ವಿಮಾನ ನಿಲ್ದಾಣದ ಹಿರಿಯ ವಲಸೆ ಅಧಿಕಾರಿ ವಿನೋದ್ ಕುಮಾರ್ ಅವರನ್ನು ಗುರುವಾರ ಬಂಧಿಸಲಾಗಿದೆ.

ಮಾರ್ಚ್18ರಂದು ಹಾಂಕಾಂಗ್‌ಗೆ ಹೊರಟಿದ್ದ ಬೆಂಗಳೂರಿನ ಮಹಿಳೆಗೆ ವಿನೋದ್ ಕುಮಾರ್ ವೈಯಕ್ತಿಕ ವಿಷಯಗಳ ಬಗ್ಗೆ ಅಸಂಬದ್ಧವಾದ ಪ್ರಶ್ನೆಗಳನ್ನು ಕೇಳಿ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದ್ದು, ಈ ಸಂಬಂಧ ಅಧಿಕಾರಿ ವಿರುದ್ಧ ಇತ್ಚೀಚಿಗೆ ಎಫ್ಐಆರ್‌ ದಾಖಲಿಸಲಾಗಿತ್ತು. ಅಲ್ಲದೆ ಪ್ರಕರಣ ಸಂಬಂಧ ಕೇಂದ್ರ ಗೃಹ ಸಚಿವಾಲಯ ಈತನನ್ನು ಸೇವೆಯಿಂದ ಅಮಾನತು ಮಾಡಿತ್ತು.

“ನಿನಗೆ ಎಷ್ಟು ಮಕ್ಕಳಿವೆ, ನೀನು ಕುಡಿಯುತ್ತೀಯಾ, ಸಿಗರೇಟ್‌ ಸೇದುತ್ತೀಯಾ, ಚಿಕನ್‌ ತಿನ್ನುತ್ತೀಯಾ, ನಿನ್ನ ಗಂಡ ಇಲ್ಲದ ವೇಳೆಯಲ್ಲಿ ಪರ ಪುರುಷರೊಂದಿಗೆ ಮಲಗುತ್ತೀಯಾ, ನನಗೆ ಮೂರನೇ ಮಗು ಪಡೆಯಲು ಅವಕಾಶ ನೀಡುತ್ತೀಯಾ’ ಎಂಬುದಾಗಿ ಮಹಿಳೆಗೆ ಈತ ಪ್ರಶ್ನೆಗಳನ್ನು ಕೇಳಿದ್ದ ಎಂದು ದೂರಲಾಗಿತ್ತು.

Write A Comment