ರಾಷ್ಟ್ರೀಯ

ಆಂಧ್ರ ಎನ್‌ಕೌಂಟರ್‌ನಲ್ಲಿ ಮೃತಪಟ್ಟ 20 ಕಾಡುಗಳ್ಳರಿಗೆ ತಮಿಳುನಾಡು ಸರ್ಕಾರದಿಂದ ಪರಿಹಾರ ಘೋಷಣೆ; ಮೃತರ ಕುಟುಂಬಕ್ಕೆ ತಲಾ ಮೂರು ಲಕ್ಷ ರುಪಾಯಿ ಪರಿಹಾರ

Pinterest LinkedIn Tumblr

andhrapra

ಚೆನ್ನೈ: ಆಂಧ್ರಪ್ರದೇಶದಲ್ಲಿ ಮಂಗಳವಾರ ನಡೆದ ಭಾರಿ ಗುಂಡಿನ ಕಾಳಗದಲ್ಲಿ ಮೃತಪಟ್ಟ 20 ಕಾಡುಗಳ್ಳರ ಕುಟುಂಬಕ್ಕೆ ತಮಿಳುನಾಡು ಸರ್ಕಾರ ಬುಧವಾರ ಪರಿಹಾರ ಘೋಷಿಸಿದೆ.

ವರದಿಗಳ ಪ್ರಕಾರ, ಎಐಎಡಿಎಂಕೆ ಸರ್ಕಾರ ಮೃತರ ಕುಟುಂಬಕ್ಕೆ ತಲಾ ಮೂರು ಲಕ್ಷ ರುಪಾಯಿ ಪರಿಹಾರ ಘೋಷಿಸಿದೆ.

ಚಿತ್ತೂರು ಜಿಲ್ಲೆ, ಚಂದ್ರಗಿರಿ ಮಂಡಲ್ ಶ್ರೀನಿವಾಸ ಮಂಗಾಪುರದ ಸಮೀಪ ನಿನ್ನೆ ಆಂಧ್ರದ ವಿಷೇಷ ಕಾರ್ಯಪಡೆ ಪೊಲೀಸರು ಮತ್ತು ಅರಣ್ಯ ಇಲಾಖೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ತಮಿಳುನಾಡಿನ 20 ರಕ್ತಚಂದನ ಕಳ್ಳರು ಹತರಾಗಿದ್ದರು. ಆದರೆ ಆಂಧ್ರದ ಈ ಕಾರ್ಯಾಚರಣೆಯನ್ನು ತೀವ್ರವಾಗಿ ವಿರೋಧಿಸಿರುವ ತಮಿಳುನಾಡು ಸರ್ಕಾರ, ಮೃತಪಟ್ಟವರು ಕಳ್ಳರಲ್ಲ, ನಮ್ಮ ರಾಜ್ಯದ ಕೂಲಿ ಕಾರ್ಮಿಕರು ಎಂದು ಹೇಳಿದೆ.

ಆಂಧ್ರಪ್ರದೇಶ ಪೊಲೀಸರ ಕ್ರಮವನ್ನು ಬಲವಾಗಿ ಖಂಡಿಸಿರುವ ತಮಿಳುನಾಡು ಸರ್ಕಾರ, ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಟೀಕಿಸಿದೆ. ಈ ಮಧ್ಯೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಹ ಆಂಧ್ರಪ್ರದೇಶ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ.

Write A Comment