ಕನ್ನಡ ವಾರ್ತೆಗಳು

ಇಸ್ಲಾಂನ ಆಚಾರ ವಿಚಾರಗಳಲ್ಲಿ ಸಂಶಯ ತೋರದೇ ಮುನ್ನಡೆಯುವುದು ನಮ್ಮ ಕರ್ತವ್ಯ : ಮುಪ್ತಿ ಬದ್ರುದ್ದೀನ್ ಶಾ

Pinterest LinkedIn Tumblr

ullalla_uroos_photo_1

ಉಳ್ಳಾಲ,ಎ.08  : ನಂಬಿಕೆ, ವಿಶ್ವಾಸ ಇಸ್ಲಾಮಿನಲ್ಲಿ ಮುಖ್ಯವಾದುದು. ಸಿದ್ದಾಂತಗಳನ್ನು ಬದಲಿಸುವ ಕಾರ್ಯ ನಮಗೆ ಬೇಡ. ಪ್ರವಾದಿ ಕಾಲದಲ್ಲಿ ಇಸ್ಲಾಮಿನ ಸಿದ್ದಾಂತಗಳು ಹೇಗಿತ್ತೋ ಅದೇ ರೀತಿ ಇರಬೇಕು. ಸಮಯಕ್ಕೆ ತಕ್ಕಂತೆ ಇಸ್ಲಾಂನ ಸಿದ್ದಾಂತಗಳನ್ನು ಬದಲಿಸುವುದು ಸಲ್ಲದು. ಇಸ್ಲಾಂನ ಆಚಾರ ವಿಚಾರಗಳಲ್ಲಿ ಸಂಶಯ ತೋರದೇ ಮುನ್ನೆಡೆಯಬೇಕಾದ ಕಾರ್ಯ ನಮ್ಮದಾಗಿದೆ ಎಂದು ಮೂಡಬಿದ್ರ ಸುನ್ನಿ ಉಲೂಂನ ಪ್ರಾಂಶುಪಾಲ ಮುಪ್ತಿ ಬದ್ರುದ್ದೀನ್ ಶಾ ಅವರು ಉಳ್ಳಾಲದಲ್ಲಿ ನಡೆಯುತ್ತಿರುವ ಉರೂಸ್ ಸಮಾರಂಭದ ಪ್ರಯುಕ್ತ ನಡೆದ ನುನ್ನಿ ಇಜ್‌ತಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ullalla_uroos_photo_2 ullalla_uroos_photo_3 ullalla_uroos_photo_4 ullalla_uroos_photo_5

ಉಳ್ಳಾಲದಲ್ಲಿ ಇಸ್ಲಾಂ ಉನ್ನತ ಮಟ್ಟಕ್ಕೆ ಬೆಳೆದು ನಿಲ್ಲಲು ಇಲ್ಲಿ ಅಂತ್ಯವಿಶ್ರಮಗೊಳ್ಳುತ್ತಿರುವ ಸೆಯ್ಯದ್ ಮದನಿಯವರ ಪವಾಢವೇ ಕಾರಣ. ಜಗತ್ತಿನಲ್ಲಿ ಬಹಳಷ್ಟು ಮಂದಿ ಇಸ್ಲಾಂ ದರ್ಮವನ್ನು ಅನುಕರಣೆ ಮಾಡಿ ಜೀವಿಸಲು ಮದನಿಯವರಂತಹ ಪವಾಢ ಪುರುಷರ ಪವಾಢವೇ ಕಾರಣ ಎನ್ನುವುದರಲ್ಲಿ ಸಂದೇಹ ಬೇಡ.. ಇಮಾನ್ ಇದ್ದವರಲ್ಲಿ ಮದನಿ ತಂಙಳ್‌ರವರ ಮೇಲೆ ನಂಬಿಕೆ ಇರುತ್ತದೆ. ವಿಶ್ವಾಸದಿಂದ ಝಿಯಾರತ್ ಮಾಡುತ್ತಾರೆ. ಆದರೆ ದಾರಿತಪ್ಪಿ ಹೋದವರಲ್ಲಿ ವಿಸ್ವಾಸ ಬರಲಾರದು. ಪವಾಢ ಪುರುಷರ ಮೇಲೆ ನಂಬಿಕೆ ಇದ್ದವರು ಪ್ರವಾದಿಯವರಿಗೆ ಅಲ್ಲಾಹನಿಗೆ ಭಯಪಡುವವರು. ಸೆಯ್ಯದ್ ಮದನಿಯವರ ಬರ್ಕತ್‌ನಿಂದ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ. ಜಗತ್ತಿನಲ್ಲಿ ಮುಸ್ಲಿಮರು ಇಮಾನ್ ಇದ್ದುಕೊಂಡು ಜೀವಿಸಿದಲ್ಲಿ ಮಾತ್ರ ಅವರ ಜೀವನ ಯಶಸ್ವಿಯಾಗಬಹುದು ಎಂದರು. ಮೌಲಾನ ಅಝೀಝ್ ಮದನಿ ಬಿಜಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಫರಾಝ್ ಅಹ್ಮದ್ ಅಮೀರಿ ನವದೆಹಲಿ ಮಾತನಾಡಿ, ಉಳ್ಳಾಲ ದರ್ಗಾ ಬಹಳಷ್ಟು ಖ್ಯಾತಿ ಪಡೆದಿರುವ ದರ್ಗಾ. ಸೆಯ್ಯದ್ ಮದನಿಯವರ ಮೇಲೆ ನಂಬಿಕೆ ಇಡುವ ಜತೆಗೆ ಅಲ್ಲಾಹನಿಗೆ ಪ್ರಾರ್ಥಿಸುವ ಕಾರ್ಯವನ್ನು ಮುಂದುವರಿಸಬೇಕು ಎಂದು ಹೇಳಿದರು ಸೆಯ್ಯದ್ ಬಾಫಕಿ ತಂಙಳ್ ಮಾತನಾಡಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್ ಹಂಝ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ದ‌ಅವಾ ಕಾಲೇಜ್‌ನ ಪ್ರೊಫೆಸರ್ ಇಬ್ರಾಹಿಂ ಅಹ್‌ಸನಿ ಪ್ರಸ್ತಾವಿಕ ಭಾಷಣ ಮಾಡಿದರು.

ullalla_uroos_photo_6 ullalla_uroos_photo_7 ullalla_uroos_photo_8 ullalla_uroos_photo_9 ullalla_uroos_photo_10 ullalla_uroos_photo_11 ullalla_uroos_photo_12

ಕಾರ್ಯಕ್ರಮದಲ್ಲಿ ಕಾರ್ಕಳ ಗುಲ್‌ಶೇ ನೂರು ಮದ್ರಸದ ಅಧ್ಯಕ್ಷ ನಾಸಿರ್ ಇಂಜಿನಿಯರ್, ಮೌಲಾನ ಸುಫಿಯಾನ್ ಸಖಾಫಿಬಳ್ಳಾರಿ,ಮುಸ್ತಫಾ ನಯೀಮಿ ಹಾವೇರಿ, ಕೊಲ್ಯ ನೂರಾನಿ ಮಸೀದಿ ಖತೀಬ್ ಯೂನುಸು ನೂರಿ, ಎಸ್‌ಎಸ್‌ಎಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಮದ್ ಅಹ್ಸನಿ, ಮೇಲಂಗಡಿ ಎಸ್‌ಎಸ್‌ಎಫ್ ಶಾಖೆಯ ಅಧ್ಯಕ್ಷ ಹಾಫಿಳ್ ಝೈನುಲ್ ಆಬಿದ್ ಸಖಾಫಿ, ಹಾಜಿ ಎ.ಕೆ. ಮೊಯ್ದಿನ್ ಉಳ್ಳಾಲ, ಮಹಮ್ಮದ್ ಅನ್ಸಾರ್ ರಝ್ವಿ ಉಪ್ಪಳ , ಉಳ್ಳಾಲ ದರ್ಗಾ ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಹನೀಫ್ ಹಾಜಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್‌ವೇ, ಝಿಯಾದ್ ತಂಙಳ್, ಅಝೀಝ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು. ಆರ್.ಕೆ. ಮದನಿ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು.

Write A Comment