ರಾಷ್ಟ್ರೀಯ

ರೇವ್‌ಪಾರ್ಟಿ ಮೇಲೆ ದಾಳಿ : ಯುವತಿಯರು ಸೇರಿ 80 ಮಂದಿ ಬಂಧನ

Pinterest LinkedIn Tumblr

Rav-Party

ಉದಯ್‌ಪುರ್(ರಾಜಸ್ಥಾನ), ಏ.7: ರಾಜಸ್ಥಾನದ ಅಹ್ಮದಾಬಾದ್ ಹೈವೇನಲ್ಲಿರುವ ತ್ರಿಸ್ಟಾರ್ ರೆಸಾರ್ಟ್ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು, 16 ಮಂದಿ ಯುವತಿಯರೂ ಸೇರಿದಂತೆ ಒಟ್ಟು 80 ಮಂದಿಯನ್ನು ಬಂಧಿಸಿದ್ದಾರೆ.

ರೆಸಾರ್ಟ್‌ನಲ್ಲಿ ರೇವ್‌ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ನೃತ್ಯ, ಮದ್ಯಪಾನ ಸೇರಿದಂತೆ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿದ್ದ ಇವರನ್ನೆಲ್ಲ ಅನೈತಿಕ ತಡೆ ಕಾಯ್ದೆ(ಪಿಟ) ಅಡಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಇವರೊಂದಿಗೆ 1 ವರ್ಷದ ಮಗು ಹಾಗೂ ಇಬ್ಬರು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇವ್‌ಪಾರ್ಟಿಯಲ್ಲಿ ಯಥೇಚ್ಚವಾಗಿ ಮದ್ಯ ಪೂರೈಕೆ ಮತ್ತು ಅಶ್ಲೀಲ ಚುಟವಟಿಕೆಗಳೂ ನಡೆಯುತ್ತಿದ್ದವು. ಈ ಪಾರ್ಟಿಯನ್ನು ರೆಸಾರ್ಟ್ ಮಾಲೀಕ ಆಯೋಜಿಸಿದ್ದು, ಹೊರ ರಾಜ್ಯಗಳಿಂದಲೂ ಕೆಲವರು ಆಹ್ವಾನಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Write A Comment