ರಾಷ್ಟ್ರೀಯ

ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಾನಸಿಕ ಅಸ್ವಸ್ಥ!: ಹಿರಿಯ ನಟ ರಾಜ್ ಬಬ್ಬರ್

Pinterest LinkedIn Tumblr

giri

ಪಟ್ಣಾ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮೈ ಬಣ್ಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಗಿರಿರಾಜ್ ಸಿಂಗ್ ಅವರನ್ನು  ಕಾಂಗ್ರೆಸ್ ನಾಯಕ, ಹಿರಿಯ ನಟ ರಾಜ್ ಬಬ್ಬರ್  ಮಾನಸಿಕ ಅಸ್ವಸ್ಥರೆಂದು ಜರಿದಿದ್ದಾರೆ.

“ಸಿಂಗ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರು ಸೋನಿಯಾ ಮತ್ತು ರಾಹುಲ್ ಗಾಂಧಿಯವರ ಬಗ್ಗೆ ಇಂತಹ ಹೇಳಿಕೆಯನ್ನು ಹೇಳಿದ್ದಾರೆ. ಕೇಂದ್ರ ಸರಕಾರದಿಂದ ಅವರ ಕಾಯಿಲೆಗೆ ಚಿಕಿತ್ಸೆ ನೀಡಲು ಸಾಧ್ಯವಾಗದಿದ್ದರೆ ಅವರ ಆಸ್ಪತ್ರೆಯ ವೆಚ್ಚವನ್ನು ನಾನೇ ಭರಿಸುತ್ತೇನೆ”, ಎಂದು  ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ ವಕ್ತಾರರಾದ  ಬಬ್ಬರ್ ವ್ಯಂಗ್ಯವಾಡಿದ್ದಾರೆ.

ಸಿಂಗ್ ಅಂತಹ ಸಮಾ  ಘಾತಕರನ್ನು  ಸಂಸದರಾಗಿ ಮುಂದುವರೆಯಲು ಬಿಟ್ಟಿರುವುದು ಜತೆಗೆ ಕೇಂದ್ರ ಸಚಿವರಾಗಿ ನೇಮಿಸಿರುವುದು ಅತಿ ಖೇದನಿಯ ಎಂದಿರುವ ಅವರು ಸೋನಿಯಾರ ಬಗ್ಗೆ ಇಂತಹ ಮಾತುಗಳನ್ನಾಡಿರುವುದು ‘ಸೂರ್ಯನಿಗೆ ಉಗಿದಂತೆ’ ಎಂದಿದ್ದಾರೆ.

ಕಳೆದ ವಾರ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೋನಿಯಾರವರ ಬಿಳಿಚರ್ಮ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಪದವಿಗೇರಿಸಿದೆ. ರಾಹುಲ್ ನೈಜಿರಿಯನ್ ಯುವತಿಯನ್ನು ಮದುವೆಯಾದರೆ ಆಕೆಯನ್ನು ಕಾಂಗ್ರೆಸ್ ಉನ್ನತ ಹುದ್ದೆಗೇರಿಸುವುದೇ? ಎಂದು ಪ್ರಶ್ನಿಸಿದ್ದರು.

Write A Comment