ಕನ್ನಡ ವಾರ್ತೆಗಳು

ಯೆಮನ್‌ ಅಂತರಿಕ ಕಲಹದಿಂದ ಪಾರಾಗಿ ಮಂಗಳೂರು ತಲುಪಿದ ರಾಜೇಶ್ ಗೌಡ

Pinterest LinkedIn Tumblr

Yaman_Return-Person_1

ಮಂಗಳೂರು: ಯೆಮನ್ ನಲ್ಲಿ ನಡೆಯುತ್ತಿರುವ ಅಂತರಿಕ ಕಲಹದಿಂದ ಸಾವಿನ ದವಡೆಯಲ್ಲಿ ಸಿಲುಕಿಕೊಂಡಿದ್ದ ಪುತ್ತೂರು ಸಮೀಪದ ಕಡಬದ ರಾಜೇಶ್ ಗೌಡ ಅವರು ಕೊನೆಗೂ ಮಂಗಳೂರು ತಲುಪಿದ್ದಾರೆ.

ಹಲವು ದಿನಗಳಿಂದ ತವರಿಗೆ ಬರಲು ಪರಿತಪಿಸುತ್ತಿದ್ದ ರಾಜೇಶ್ ಗೌಡ ಅವರು ವಿಷೇಶ ವಿಮಾನದಲ್ಲಿ ಕೊಚ್ಚಿಗೆ ಬಂದು ಅಲ್ಲಿಂದ ರೈಲಿನಲ್ಲಿ ಶನಿವಾರ ಮಂಗಳೂರು ತಲುಪಿ ಕುಟುಂಬ ಸದಸ್ಯರ ಮುಖದಲ್ಲಿ ಸಂತಷ ಅರಳುವಂತೆ ಮಾಡಿದ್ದಾರೆ. ಮಂಗಳೂರಿನ ರಲ್ವೇ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ರಾಜೇಶ್ ಗೌಡ ಅವರು ಇಳಿಯುತ್ತಿದ್ದಂತೆ ಕುಟುಂಬ ಸದಸ್ಯರ ಜೊತೆ ಪತ್ರಿಕಾ ಮಾದ್ಯಮದವರು ಅವರನ್ನು ಸ್ವಾಗತಿಸಿದರು.

Yaman_Return-Person_2 Yaman_Return-Person_4 Yaman_Return-Person_3

Yaman_Return-Person_5

ಯೆಮನ್ ನಿಂದ ದಜಿಬೌತಿಗೆ ಬಂದು ಏಪ್ರಿಲ್ 3 ರಂದು ಸಂಜೆ 3 ಗಂಟೆಗೆ ವಿಮಾನ ಹತ್ತಿ, ಅದು ಕೊಚ್ಚಿಗೆ ಬೆಳಗಿನಜಾವ ತಲುಪಿದೆ, ಅಲ್ಲಿಂದ ನಂತರ ಬೆಳಿಗ್ಗೆ 7 ಗಂಟೆಗೆ ನೇರವಾಗಿ ರೈಲಿನಲ್ಲಿ ಹೊರಟು ಮಂಗಳೂರನ್ನು 12.30ಕ್ಕೆ ತಲುಪಿದ್ದೇನೆ ಎಂದು ಖುಷಿಯಿಂದ ಹೇಳಿದ ಅವರು, ಪುನಹ ಯೆಮನ್ ಗೆ ಹೋಗುವುದಿಲ್ಲವೆಂದು ಹೇಳಿದರು. ಆದರೆ ತಾನು ದುಡಿಯುತ್ತಿದ್ದ ಅಲ್ಲಿಯ ಕಂಪೆನಿ ತನ್ನನ್ನು ಭಾರತಕ್ಕೆ ಕಳುಹಿಸಲು ಸಕಲ ಪ್ರಯತ್ನ ಪಟ್ಟಿದೆ. ಜೊತೆಗೆ ಭಾರತ ಸರ್ಕಾರವೂ ಉತ್ತಮವಾಗಿ ಸ್ಪಂದಿಸಿತೆಂದು ರಾಜೇಶ್ ಗೌಡ ಸುದ್ಧಿಗಾರರಲ್ಲಿ ಹೇಳಿದರು

Write A Comment