ರಾಷ್ಟ್ರೀಯ

ಐಎಎಸ್ ಟ್ರೈನಿ ಎಂದು ಅಕಾಡೆಮಿಯಲ್ಲಿ ತಂಗಿದ್ದ ರುಬಿ ಚೌಧರಿ ಬಂಧನ

Pinterest LinkedIn Tumblr

Rubi-choudari

ಮುಸ್ಸೂರಿ, ಏ.4- ತರಬೇತಿಯಲ್ಲಿರುವ ಐಎಎಸ್ ಅಭ್ಯರ್ಥಿಯಂತೆ ಸೋಗು ಹಾಕಿ, ನಕಲಿ ಗುರುತಿನ ಚೀಟಿ ತೋರಿಸಿ ಇಲ್ಲಿನ ಪ್ರತಿಷ್ಠಿತ ಲಾಲ್‌ಬಹಾದ್ದೂರ್ ಶಾಸ್ತ್ರಿ ಅಡ್ಮಿನಿಸ್ಟ್ರೇಟಿವ್ ಅಕಾಡೆಮಿಯಲ್ಲಿ ತಂಗಿದ್ದ ರುಬಿ ಚೌಧರಿ ಅವರನ್ನು ಉತ್ತರಾಖಂಡ್ ಪೊಲೀಸರು ಇಂದು ಬಂಧಿಸಿದ್ದಾರೆ.  ಸುಳ್ಳಿನ ಪ್ರಕರಣ ಬಯಲಿಗೆ ಬಂದ ನಂತರ ಆಡಳಿತ ಮಂಡಳಿಯವರು  ತನ್ನಿಂದ  ಲಂಚ ಪಡೆದು ಇಲ್ಲಿ ತಂಗಲು ಅವಕಾಶ ಮಾಡಿಕೊಟ್ಟಿದ್ದರು ಎಂದು   ರುಬಿ ಚೌಧುರಿ ಆರೋಪಿಸಿದ್ದನ್ನು  ಆಡಳಿತ ಮಂಡಳಿ ಕಡೆಗಣಿಸಿತು.

ಈ ಹಿನ್ನೆಲೆಯಲ್ಲಿ ರುಬಿ ಅವರು ಅಕಾಡೆಮಿಯ ಉಪನಿರ್ದೇಶಕ ಸೌರಭ್ ಜೈನ್ ಅವರಿಗೆ ಆಡಳಿತ ಮಂಡಳಿ ರಕ್ಷಣೆ ನೀಡುತ್ತಿದೆ. ನನಗೆ  ಒಂದು ವೇಳೆ ನ್ಯಾಯ ದೊರೆಯದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಬೆದರಿಕೆ ಹಾಕಿದ ಪರಿಣಾಮ ಇಂದು ಪೊಲೀಸರು ಬಂಧಿಸಿದ್ದಾರೆ.

ಇಡೀ ಅಕಾಡೆಮಿಯ ಆಡಳಿತ ಮಂಡಳಿ ಸಾಮೂಹಿಕವಾಗಿ ಸೌರಭ್ ಜೈನ್ ರಕ್ಷಣೆಗೆ ನಿಂತಿದೆ. ತಾನು ಯಾವುದೇ ರೀತಿಯ ಅಕ್ರಮ ಮಾಡಿಲ್ಲ ಎಂದಾದರೆ ಜೈನ್ ಬಹಿರಂಗವಾಗಿ ಬಂದು ಹೇಳಿಕೆ ನೀಡಲಿ ಎಂದು ರುಬಿ ಸವಾಲು ಹಾಕಿದ್ದಾರೆ.
ಇಡೀ ಪ್ರಕರಣದಲ್ಲಿ ನಮ್ಮನ್ನೆಲ್ಲ ಕತ್ತಲೆಯಲ್ಲಿರಿಸಲಾಗಿದ್ದು,  ನಮಗೆ ಯಾವುದೇ ಸ್ಪಷ್ಟ ಮಾಹಿತಿಗಳನ್ನೂ ಅಕಾಡೆಮಿ ಆಡಳಿತ ಮಂಡಳಿಯವರು ನೀಡಿಲ್ಲ ಎಂದು ರುಬಿ ಅವರ ಪತಿ ವೀರೇಂದ್ರ ಮಲ್ಲಿಕ್ ಆರೋಪಿಸಿದ್ದಾರೆ.  ಪ್ರಕರಣದ ಎಲ್ಲ ಆಯಾಮಗಳ ಬಗ್ಗೆಯೂ ಸೂಕ್ತ ತನಿಖೆ ನಡೆಯಬೇಕು. ಸತ್ಯಹೊರಬರಬೇಕು ಎಂದು ವೀರೇಂದ್ರ ಮಾಲ್ಲಿಕ್ ಆಗ್ರಹಿಸಿದ್ದಾರೆ.

Write A Comment