ರಾಷ್ಟ್ರೀಯ

ಮನೆಯವರಿಗೆ ವರ್ಷವಿಡೀ ಮೂತ್ರದ ಚಹಾ ಕುಡಿಸಿದ ಸೊಸೆ..!

Pinterest LinkedIn Tumblr

Sose-Tea

ಇಂದೋರ್,ಏ.4- ಅವಳಿಗೆ ಅವನ ಜೊತೆ ಮದುವೆಗೆ ಇಷ್ಟವಿರಲಿಲ್ಲ.  ಹಿರಿಯರು ಬಲವಂತವಾಗಿ ಮದುವೆ ಮಾಡಿಸಿದ್ದರು. ಹಾಗಾಗಿ ಅವಳಿಗೆ ತನ್ನ ಗಂಡನ ಮನೆಯವರ ಮೇಲೆ ಭಾರೀ ಸಿಟ್ಟಿತ್ತು. ಆ ಸಿಟ್ಟನ್ನು ತೀರಿಸಿಕೊಳ್ಳಲು ಅವಳು ಹಿಡಿದ ದಾರಿ ಯಾವುದು..?! 30ರ ಹರೆಯದ ರೇಖಾ ನಾಗವಂಶಿಗೆ 34 ವರ್ಷದ ದೀಪಕ್ ಎಂಬುವನ ಜೊತೆ ಮದುವೆಯಾಗಿತ್ತು. ಒಲ್ಲದ ಗಂಡನ ಮೇಲಿನ ಸಿಟ್ಟು ತೀರಿಸಿಕೊಳ್ಳಲು ನಾಗವಂಶಿ, ಮನೆಯವರಿಗೆಲ್ಲ ಚಹಾ ಕೊಡುವಾಗ ಅದರಲ್ಲಿ ಮೂತ್ರ ಮಾಡಿ ಕೊಡುತ್ತಿದ್ದಳು. ಬರೋಬ್ಬರಿ ಒಂದು ವರ್ಷ ಗಂಡನ

ಮನೆಯವರೆಲ್ಲ(ಅತ್ತೆ, ಮಾವ, ಮೈದುನರು) ಚಹಾ ಎಂದು ಇವಳ ಮೂತ್ರವನ್ನೇ ಕುಡಿದಿದ್ದಾರೆ.  ಒಂದು ದಿನ ಇವಳು ಚಹಾ ತಯಾರಿಸುವಾಗ ಅತ್ತೆ ಅಡಿಗೆ ಮನೆಗೆ ಬಂದಿದ್ದಾಳೆ. ಆಗ ಸೊಸೆಯ ಈ ಕೃತ್ಯ ಬಯಲಾಗಿದೆ. ವಿಚಾರಿಸಿದಾಗ ಕಳೆದ ಒಂದು ವರ್ಷದಿಂದಲೂ ತಾನು ಮೂತ್ರದಲ್ಲೇ ಚಹಾ ಮಾಡಿಕೊಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾಳೆ.

ಮನೆಯವರು ಈ ಬಗ್ಗೆ ದೂರು ನೀಡಿದರೆ ಮೂತ್ರದ ಚಹಾ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.  ಒಂದು ನಾಗವಂಶಿ ಗಂಡನ ಮನೆ ಬಿಟ್ಟು ತವರಿಗೆ ವಾಪಸ್ಸಾಗಿದ್ದಳಂತೆ. ಆಗ ಅವಳ ಗೆಳತಿ ಮಗುವಿನ ಹಿತದೃಷ್ಟಿಯಿಂದ ಗಂಡನ ಮನೆಗೆ ಹೋಗುವಂತೆ ಹೇಳಿ ಕಳುಹಿಸಿದ್ದಾಳಂತೆ. ದೀಪಕ್ ಜತೆ 8 ವರ್ಷಗಳ ಹಿಂದೆ ಮದುವೆಯಾಗಿರುವ ನಾಗವಂಶಿಗೆ 4 ವರ್ಷದ ಮಗಳಿದ್ದಾಳೆ.  ಅಂತೂ ಕೊನೆಗೆ ಈ ಪ್ರಕರಣ ಬಗೆಹರಿಸುವುದು ಹೇಗೆ ಎಂಬುದು ಅರ್ಥವಾಗದ ಮನೆಯವರು ಚಿಂತಿತರಾಗಿದ್ದರಂತೆ. ಅವರ ಮನೆಯಲ್ಲಿ ಈಗ ನಾಗವಂಶಿ ಚಹಾ ಎಂದರೆ ಎಲ್ಲರಿಗೂ ವಾಂತಿಯಾಗುವುದೊಂದೇ ಬಾಕಿ!

Write A Comment