ರಾಷ್ಟ್ರೀಯ

ಅಪ್ರಾಪ್ತ ಸೋದರಿಯರಿಬ್ಬರ ಅಪಹರಿಸಿ ಸಾಮೂಹಿಕ ಅತ್ಯಾಚಾರ

Pinterest LinkedIn Tumblr

Rape1

ಬದೌನ್, ಏ.2: ಈ ಮೊದಲು ನಡೆದ ಸಾಲು ಸಾಲು ಅತ್ಯಾಚಾರ ಪ್ರಕರಣಗಳು ಮಾಸುವ ಮುನ್ನವೇ ಉತ್ತರ ಪ್ರದೇಶದ ಬದೌನ್‌ನಲ್ಲಿ ಅಪ್ರಾಪ್ತ ವಯಸ್ಸಿನ ಸಹೋದರಿಯರಿಬ್ಬರನ್ನು ಅಪಹರಿಸಿದ ಐವರು ದುಷ್ಕರ್ಮಿಗಳು ಅವರಿಗೆ ಬಂದೂಕು ತೋರಿಸಿ ಬೆದರಿಸಿ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಸಾರ್ವಜನಿಕರನ್ನು ಕೆರಳಿಸಿದೆ. ಬಾಲಕಿಯರಿಬ್ಬರೂ ರಾತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಅವರಿಗಾಗಿ ಹುಡುಕುತ್ತ ಹೋಗಿದ್ದಾರೆ. ಊರ ಹೊರಗೆ ಬಂದಾಗ ಬಾಲಕಿಯರಿಬ್ಬರೂ ಸಹಾಯಕ್ಕಾಗಿ ಕಿರುಚಾಡುತ್ತಿದ್ದುದು ಕೇಳಿಬಂದಿದೆ.

ಕೂಡಲೇ ಆ ಸ್ಥಳಕ್ಕೆ ದಾವಿಸಿದ ಹಿರಿಯರು ಹುಡುಗಿಯರನ್ನು ರಕ್ಷಿಸಿ, ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಗಳಲ್ಲಿ ಇಬ್ಬರು ಸಹೋದರರಿದ್ದು, ಅವರು ಆ ಬಾಲಕಿಯರನ್ನು ಬಂದೂಕು ತೋರಿಸಿ ಅಪಹರಿಸಿದ್ದಾರೆ. ನಂತರ ಐವರೂ ಸೇರಿ ಅತ್ಯಾಚಾರ ಎಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸೌಮಿತ್ರಾ ಯಾದವ್ ತಿಳಿಸಿದ್ದಾರೆ. ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರೆ. ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ. 2014ರಲ್ಲೂ ಇದೇ ರೀತಿ 14 ಮತ್ತು 15 ವಯಸ್ಸಿನ ಸಹೋದರಿಯರಿಬ್ಬರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಊರ ಹೊರಗಿನ ಮರಕ್ಕೆ ನೇಣು ಹಾಕಿ ಕೊಲ್ಲಲಾಗಿತ್ತು. ಇಂಥ ಹಲವು ಅತ್ಯಾಚಾರ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿವೆ.

Write A Comment