ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೇ ಸಾಗಿದ್ದು, ಸೇಲ್ಸ್ ಗರ್ಲ್ ಒಬ್ಬಳನ್ನು ಇಬ್ಬರು ಕಾಮುಕರು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ನಡೆಸಿದ ಹೇಯ ಘಟನೆ ನಡೆದಿದೆ.
ದೆಹಲಿಯ ಸಬ್ಜಿಮಂಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ರಾಜೌರಿ ಗಾರ್ಡನ್ ಪ್ರದೇಶದಲ್ಲಿರುವ ಮಾಲ್‌ನ ಸೇಲ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುವತಿಗೆ ಪರಿಚಯವಿದ್ದ ವಿಪಿನ್ ಮತ್ತು ಮನೋಜ್ ಎಂಬ ಕಾಮುಕರೇ ಈ ಕೃತ್ಯ ಎಸಗಿದ್ದಾರೆ.
ಅತ್ಯಾಚಾರಕ್ಕೊಳಗಾದ ಮಹಿಳೆ 2002ರಲ್ಲಿ ವಿವಾಹವಾಗಿದ್ದು ಗಂಡನಿಂದ ದೂರವಾಗಿ ತನ್ನ ಮೂವರು ಮಕ್ಕಳೊಂದಿಗೆ ಸಬ್ಜಿಮಂಡಿ ಪ್ರದೇಶದಲ್ಲಿ ವಾಸವಾಗಿದ್ದಳು. ಇದನ್ನು ಅರಿತಿದ್ದ ಕಾಮುಕರು ಮನೆ ಹೊರಗಡೆ ಬಂದು ಆಕೆಗೆ ಕರೆ ಮಾಡಿ ಹೊರಬರುವಂತೆ ಸೂಚಿಸಿದ್ದಾರೆ . ಮತ್ತೇನೋ ಇರಬೇಕೆಂದುಕೊಂಡ ಮಹಿಳೆ ಹೊರಬಂದಿದ್ದು ಬಂದ ತಕ್ಷಣ ಆಕೆಯನ್ನು ಕಾರಿನಲ್ಲಿ ಕರೆದೊಯ್ದು ಬೀಯರ್ ಕುಡಿಸಿ ಕಾರಿನಲ್ಲಿಯೇ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
