ಉತ್ತರ ಪ್ರದೇಶ: ಹುಟ್ಟುವಾಗಲೇ ಸೊಂಡಿಲು ಹೊಂದಿರುವ ಹೆಣ್ಣು ಮಗುವೊಂದು ಉತ್ತರ ಪ್ರದೇಶದ ಆಲಿಘರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿದ್ದು, ಈ ಮಗು ಗಣಪತಿಯ ಅವತಾರವೆಂದು ನಂಬಿರುವ ಜನರು ಪೂಜೆ ಸಲ್ಲಿಸುತ್ತಿದ್ದಾರೆ.
ಗುರುವಾರದಂದು ಈ ಮಗುವಿನ ಜನನವಾಗಿದ್ದು, ಸೊಂಡಿಲು ಹೊಂದಿರುವ ಮಗು ಜನಿಸಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ. ಈಗ ಈ ಮಗುವನ್ನು ವೀಕ್ಷಿಸಲು ದೂರದ ಊರುಗಳಿಂದಲೂ ಜನರು ಆಗಮಿಸುತ್ತಿದ್ದು, ಕೆಲವರು ಪೂಜೆ ಸಲ್ಲಿಸುತ್ತಿದ್ದಾರಲ್ಲದೇ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮಗುವಿನ ಮುಂದೆ ಪ್ರಾರ್ಥಿಸುತ್ತಿದ್ದಾರೆ.
ಮಗುವನ್ನು ನೋಡಲು ದೇವಸ್ಥಾನದಲ್ಲಿರುವಂತೆ ಕ್ಯೂ ಬೆಳೆಯುತ್ತಿದ್ದು ಜನರನ್ನು ನಿಯಂತ್ರಿಸಲು ಪೋಷಕರಿಗೆ ಸಾಕು ಸಾಕಾಗಿದೆ. ಇವರ ಪುಟ್ಟ ಮನೆ ಹಣ್ಣು ಕಾಯಿಗಳಿಂದ ತುಂಬಿ ಹೋಗಿದೆ. ಮಗುವಿಗೆ ಸೊಂಡಿಲು ಇರುವುದಕ್ಕೆ ಪ್ರತಿಕ್ರಿಯೆ ನೀಡಿರುವ ವೈದ್ಯರುಗಳು ಮಗುವಿನ ಜೀನ್ ಕಾರಣ ಈ ರೀತಿಯ ಬೆಳವಣಿಗೆಯಾಗಿದೆ. ಇದರಿಂದ ಜೀವಾಪಾಯವಿಲ್ಲವಾದರೂ ಮುಂದೆ ಶಸ್ತ್ರ ಚಿಕಿತ್ಸೆ ಮಾಡಿಸುವುದು ಸೂಕ್ತ ಎಂದಿದ್ದಾರೆ.