ಮನೋರಂಜನೆ

“ಅವರೇನು ನನ್ನನ್ನು, ಸಾಯಿಸ್ತಾರಾ? ರೇಪ್ ಮಾಡ್ತಾರಾ?: ವಿಧಾನಸಭೆಯಲ್ಲಿ ಕಾಲೆತ್ತಿದ ನಟಿ ಕಂ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕಿ ರೋಜಾ !

Pinterest LinkedIn Tumblr

rojaಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ‘ಕಲಾವಿದ’ (1997) ಚಿತ್ರದಲ್ಲಿ “ಹೂವಾ ರೋಜಾ ಹೂವ..ಹೂವ ನನ್ನ ಜೀವ..” ಎಂದು ಮೈ ಕುಲುಕಿಸಿದ್ದ ತಾರೆ ರೋಜಾ ಈಗ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕಿ ಎಂಬುದು ಗೊತ್ತೇ ಇದೆ. ಅವರು ಕೊಟ್ಟಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರ ಮಾತನ್ನು ಕೇಳಿದವರೂ ಗಲಿಬಿಲಿಗೊಂಡಿದ್ದಾರೆ. “ಅವರು ನನ್ನನ್ನೇನು ಮಾಡಲಾರರು, ರೇಪ್ ಮಾಡುವ ಗುಂಡಿಗೆ ಅವರಿಗಿಲ್ಲ” ಎಂದಿದ್ದಾರೆ. ಆಂಧ್ರ ವಿಧಾನಸಭೆ ಕಲಾಪದಲ್ಲಾದ ಗಲಾಟೆ ಗದ್ದಲದ ಬಗ್ಗೆ ಅವರು ಪ್ರಸ್ತಾಪಿಸುತ್ತಾ ಈ ಮಾತನ್ನು ಆಡಿದ್ದಾರೆ.

ಟಿವಿ ವಾಹಿನಿಯ ಮಹಿಳಾ ಪತ್ರಕರ್ತೆಯೊಬ್ಬರು ರೋಜಾರನ್ನು ಮಾತಿಗೆಳೆದರು. “ನೀವು ಪದೇಪದೇ ವಿಧಾನಸಭೆಯಲ್ಲಿ ಗಲಾಟೆ ಗದ್ದಲ ಮಾಡುತ್ತಿದ್ದೀರಾ. ಈ ಹಿನ್ನೆಲೆಯಲ್ಲಿ ಸಾಕಷ್ಟು ರಾದ್ಧಾಂತವಾಗಿದೆ. ನಿಮ್ಮನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದುಕೊಳ್ಳುತ್ತಿದ್ದೀರಾ?” ಎಂದು ಮಹಿಳಾ ಪತ್ರಕರ್ತೆ ಕೇಳಿದರು.

ಈ ಪ್ರಶ್ನೆಗೆ ಉತ್ತರಿಸುತ್ತಾ ರೋಜಾ, “ಅವರೇನು ಮಾಡುತ್ತಾರೆ ನನ್ನನ್ನು, ಸಾಯಿಸ್ತಾರಾ? ರೇಪ್ ಮಾಡ್ತಾರಾ? ರೇಪ್ ಮಾಡುವ ಗುಂಡಿಗೆ ಅವರಿಗಿದೆಯೇ. ಒಂದೋ ಸಾಯಿಸಬೇಕು ಇಲ್ಲಾ ಕೇಸ್ ಹಾಕಬಹುದು. ಅದನ್ನು ಬಿಟ್ಟು ಇನ್ನೇನು ಕೀಳಕ್ಕೆ ಸಾಧ್ಯವಿಲ್ಲ” ಎಂದಿರುವುದು ಟಾಲಿವುಡ್ ನಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ.

ವಿಧಾನ ಸಭೆಯಲ್ಲಿ ಕಾಲೆತ್ತಿದ ಶಾಸಕಿ !
ವಿಧಾನಸಭೆಯಲ್ಲಿ ಕೈತೋಳು ಮಡಿಸಿದವರನ್ನು, ಬಟ್ಟೆ ಹರಿದುಕೊಂಡವರನ್ನು, ತೊಡೆ ತಟ್ಟಿದವರನ್ನು ನೋಡಿದ್ದೀರಿ. ಆದರೆ ಆಂಧ್ರಪ್ರದೇಶದ ಶಾಸಕಿಯೊಬ್ಬಳು ಕಾಲೆತ್ತುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು. ಒಂದು ಕಾಲದಲ್ಲಿ ದಕ್ಷಿಣ ಭಾರತದ ಹಾಟ್ ನಟಿ ಎಂದೇ ಪ್ರಸಿದ್ದಿಯಾಗಿದ್ದ  ರೋಜಾ ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ನ ಶಾಸಕಿಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇದೀಗ ಈ ನಟಿ ಹಾಗೂ ಶಾಸಕಿ ವಿಧಾನಸಭೆಯಲ್ಲಿ ಅಬ್ಬರಿಸಿದ್ದಾರೆ.

ಆಂಧ್ರದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ವಿಷಯವೊಂದಕ್ಕೆ ಸಂಬಂಧಿಸಿ ಶಾಸಕಿ ರೋಜಾ ತಾಳ್ಮೆ ಕಳೆದುಕೊಂಡು ಶಾಸಕರೊಬ್ಬರಿಗೆ ಕಾಲನ್ನು ಎತ್ತಿ ತೋರಿಸಿರುವುದು ಇದೀಗ ವಿವಾದ ಸೃಷ್ಟಿಸಿದೆ. ಅಧಿವೇಶನದ  ಚರ್ಚೆ ಸಮಯದಲ್ಲಿ ಅಂದರೆ ಎರಡು  ದಿನಗಳ ಹಿಂದೆ ಈ ಘಟನೆ ನಡೆದಿದ್ದು ಈ ಕುರಿತಾದ ಫೋಟೋ ಹರಿದಾಡುತ್ತಿದೆ.

Write A Comment