ರಾಷ್ಟ್ರೀಯ

ಮೋದಿ ಅತೃಪ್ತಿ: ದೇಗುಲ ನೆಲಸಮ

Pinterest LinkedIn Tumblr

tem

ನವದೆಹಲಿ/ರಾಜ್‌ಕೋಟ್: ತಮ್ಮ ಹೆಸರಿನಲ್ಲಿ ದೇವಾಲಯ ನಿರ್ಮಿ­ಸಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ ನಂತರ, ಓಂ ಯುವ ಗ್ರೂಪ್ ಸಂಘಟನೆಯ ಸದಸ್ಯರು ದೇವಾ­ಲಯವನ್ನು ನೆಲಸಮ ಮಾಡಿದ್ದಾರೆ. ಫೆ. 15ರಂದು ಉದ್ಘಾಟನೆ­ಯಾಗಬೇಕಿದ್ದ ದೇವಾಲಯ ಅದಕ್ಕೂ ಮೂರು ದಿನ ಮೊದಲೇ ನೆಲಸಮವಾಗಿದೆ.

ಗುಜರಾತ್‌ನಲ್ಲಿ ತಮ್ಮ ಹೆಸರಲ್ಲಿ ದೇವಾ­ಲಯ ನಿರ್ಮಿಸಿರುವ ಕುರಿತು ಪ್ರಧಾನಿ  ಮೋದಿ ಆಘಾತ ವ್ಯಕ್ತಪಡಿಸಿ­ದ್ದರು. ‘ದೇವಾಲಯ ಕುರಿತು ಪತ್ರಿಕಾ ವರದಿ­ಗಳನ್ನು ನೋಡಿ ನನಗೆ ದುಃಖವಾಗಿದೆ. ಇದರ ಬದಲು ಸ್ವಚ್ಚ ಭಾರತ ಅಭಿಯಾನಕ್ಕೆ ನಿಮ್ಮ ಸಂಪ­ನ್ಮೂಲ ಮತ್ತು ಶ್ರಮ ಮೀಸಲಿಡಿ’ ಎಂದು ಮೋದಿ ಮನವಿ ಮಾಡಿದ್ದಾರೆ.

‘ಪ್ರಧಾನಿ ಮೋದಿ ಅವರ ಹೇಳಿಕೆಯ ನಂತರ ಅವರ ಪ್ರತಿಮೆಯನ್ನು ತೆರವು ಮಾಡಿದ್ದೆವು. ಈಗ ದೇವಾಲಯವನ್ನೂ ಉರುಳಿಸಿದ್ದೇವೆ’ ಎಂದು ಓಂ ಯುವ ಗ್ರೂಪ್‌ ಸಂಘಟನೆಯ ಸದಸ್ಯರು ತಿಳಿಸಿದ್ದಾರೆ.

ಸಂಘಟನೆಯ 350 ಸದಸ್ಯರಿಂದ ಸಂಗ್ರಹಿಸಿದ್ದ ₨ 7 ಲಕ್ಷದಲ್ಲಿ ದೇವಾ­ಲಯ ನಿರ್ಮಿಸಲಾಗಿತ್ತು. ಮೋದಿ ಪ್ರತಿಮೆ ನಿರ್ಮಾಣಕ್ಕೇ ₨ 1.7 ಲಕ್ಷ ವೆಚ್ಚವಾ­ಗಿತ್ತು. ಫೆ.16ರಂದು ದೇವಾ­ಲಯದ ಉದ್ಘಾಟನಾ ಕಾರ್ಯ­ಕ್ರಮ ಆಯೋಜಿಸಲಾಗಿತ್ತು.

ಮುಲಾಯಂ ದೇವಾಲಯ: ಅಜಂ ಪ್ರಸ್ತಾವ
ಲಖನೌ (ಪಿಟಿಐ):ತಮ್ಮ ಹೆಸರಿನಲ್ಲಿ ದೇವಾಲಯ ನಿರ್ಮಿಸಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅತೃಪ್ತಿ ವ್ಯಕ್ತಪಡಿಸಿರುವುದರ ಬೆನ್ನಿಗೇ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಹೆಸರಿನಲ್ಲಿ ದೇವಾಲಯ ನಿರ್ಮಿಸುವ ಪ್ರಸ್ತಾವವನ್ನು ಉತ್ತರ ಪ್ರದೇಶ ಸಚಿವ ಅಜಂ ಖಾನ್‌ ಮುಂದಿರಿಸಿದ್ದಾರೆ.

‘ದೇವಾಲಯ ನಿರ್ಮಿಸುವ ಪ್ರಸ್ತಾವವವನ್ನು ಮುಲಾಯಂ ಅವರ ಮುಂದೆ ಇರಿಸುತ್ತೇನೆ. ಅವರು ಒಪ್ಪಿಗೆ ನೀಡಿದರೆ ತಕ್ಷಣವೇ ಕಾಮಗಾರಿ ಆರಂಭಿಸಲಾ­ಗುವುದು’ ಎಂದು ಅಜಂ ಖಾನ್‌ ಹೇಳಿದ್ದಾರೆ. ತಮ್ಮ ನಿರ್ಧಾರವನ್ನು ಸಮರ್ಥಿಸಿ­ಕೊಂಡಿರುವ ಅಜಂ ಖಾನ್‌, ‘ಮುಲಾಯಂ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗಾಗಿ ಅವರ ಹೆಸರಿನಲ್ಲಿ ದೇವಾಲಯ ಯಾಕೆ ನಿರ್ಮಿಸಬಾರದು’  ಎಂದು ಪ್ರಶ್ನಿಸಿದ್ದಾರೆ.

Write A Comment