ರಾಷ್ಟ್ರೀಯ

ಅಡ್ವಾಣಿಗೆ ‘ಪದ್ಮವಿಭೂಷಣ’: ಕೇಂದ್ರ ಚಿಂತನೆ

Pinterest LinkedIn Tumblr

Advani, Ramdev

ನವದೆಹಲಿ, ಜ.6:ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಮತ್ತೋರ್ವ ಹಿರಿಯ ನಾಯಕ ಭೀಷ್ಮ ಪಿತಾಮಹ ಲಾಲ್‌ಕೃಷ್ಣ ಅಡ್ವಾಣಿ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ನೀಡಲು ಮುಂದಾಗಿದೆ.

ದೇಶದ ಭಾರತರತ್ನ ಪ್ರಶಸ್ತಿ ಬಳಿಕ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಗೆ ಅಡ್ವಾಣಿ ಅವರನ್ನು ಪರಿಗಣಿಸಲು ಬಿಜೆಪಿ ತೀರ್ಮಾನಿಸಿದೆ ಎಂದು ಮೂಲಗಳು ಖಚಿತಪಡಿಸಿದೆ. ಅಡ್ವಾಣಿ ಜೊತೆಗೆ ಯೋಗಗುರು ಬಾಬಾ ರಾಮ್‌ದೇವ್ ಹೆಸರಾಂತ ಯೋಗ ಪಂಡಿತ ಡೇವಿಡ್ ಫ್ರಾಲೆ ಹಾಗೂ ಬಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರಿಗೆ ಈ ಪ್ರಶಸ್ತಿ ನೀಡಲು ಸರ್ಕಾರ ಮುಂದೆ ಬಂದಿದೆ. 87 ವರ್ಷದ ಹಿರಿಯ ನಾಯಕ ಅಡ್ವಾಣಿ ಅವರು ಭಾರತದ ಸಂಸತ್‌ಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ನೀಡಲು ಸಮ್ಮತಿಸಿದ್ದು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳಲಿದೆ.

2002-04ರ ವೇಳೆ ಎನ್‌ಡಿಎ ಅವಧಿಯಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ ಸಂಪುಟದಲ್ಲಿ ಗೃಹ ಸಚಿವರ ಜೊತೆಗೆ ಉಪಪ್ರಧಾನಿಯಾಗಿಯೂ ಕಾರ್ಯನಿರ್ವಹಿಸಿದ್ದರು. ರಾಮಜನ್ಮ ಭೂಮಿ, ರಥಯಾತ್ರೆ ಸೇರಿದಂತೆ ಸಂಸತ್‌ಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅಡ್ವಾಣಿಗೆ ಈ ಪ್ರಶಸ್ತಿ ನೀಡಬೇಕೆಂಬುದು ಸರ್ಕಾರ ಇಚ್ಛೆಯಾಗಿದೆ. ಯೋಗಾಭ್ಯಾಸದ ಮೂಲಕ ವಿಶ್ವದಾದ್ಯಂತ ಯೋಗವನ್ನು ಪರಿಚಯ ಮಾಡುತ್ತಿರುವಂತಹ ಹಾಗೂ ಹೆಸರಾಂತ ಆಟಗಾರ್ತಿ ಸೈನಾ ನೆಹ್ವಾಲ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲು ಆಯ್ಕೆ ಸಮಿತಿ ಶಿಫಾರಸ್ಸು ಮಾಡಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

Write A Comment