ರಾಷ್ಟ್ರೀಯ

ಬಂಗಾರ ನುಂಗಿ ಬಂಧಿತಾನದ; ಇದೀಗ ಪೊಲೀಸರ ಅತಿಥಿ

Pinterest LinkedIn Tumblr

gold-coins

ಹೈದ್ರಬಾದ್: ಸುಂಕಾಧಿಕಾರಿಗಳ ಕಣ್ಣು ತಪ್ಪಿಸಿ, ದೇಶ ವಿದೇಶಗಳಿಂದ ಚಿನ್ನ ಕಳ್ಳಸಾಗಣೆ ಮಾಡಲು ಚೋರರು ತರೆಹೆವಾರಿ ಉಪಾಯ ಮಾಡುತ್ತಾರೆ. ಇಲ್ಲೊಬ್ಬ ಭೂಪ ವಿಭಿನ್ನ ರೀತಿಯಲ್ಲಿ ಚಿನ್ನ ಕಳ್ಳ ಸಾಗಣೆ ಮಾಡಲು ಯತ್ನಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಅಬ್ದುಲ್ ಕರೀಂ ಎಂಬಾತ ಕೌಲಾಲಂಪುರ ನಿಂದ ಹೈದ್ರಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದನು. ಅಬ್ದುಲ್ ಕರೀಂ ಅಕ್ರಮವಾಗಿ ಚಿನ್ನದ ನಾಣ್ಯಗಳನ್ನು ಸಾಗಿಸುತ್ತಿರುವುದಾಗಿ ಮೊದಲೇ ಮಾಹಿತಿ ತಿಳಿದಿದ್ದ ಸುಂಕಾಧಿಕಾರಿಗಳು ಅಬ್ದುಲ್ ಕರೀಂನನ್ನು ತಪಾಸಣೆಗೊಳಪಡಿಸಿದರು.

ತಪಾಸಣೆ ವೇಳೆ ಆತನನ್ನು ಪರೀಕ್ಷಿಸಿದಾಗ ಆತನ ಕೈಯಲ್ಲಿ, ಚೀಲದಲ್ಲಿ ಯಾವುದೇ ಚಿನ್ನದ ನಾಣ್ಯಗಳು ಪತ್ತೆಯಾಗಿಲ್ಲ. ಬಳಿಕ ಡಿಟೆಕ್ಟರ್ ಮೂಲಕ ದೈಹಿಕ ತಪಾಸಣೆ ಮಾಡಿದಾಗ ಆತ ಚಿನ್ನದ ನಾಣ್ಯಗಳು ನುಂಗಿರುವುದು ತಿಳಿದುಬಂದಿತು. ಆತ ನುಂಗಿದ ಚಿನ್ನದ ತೂಕ ಎಷ್ಟು ಗೊತ್ತೆ. 350 ಗ್ರಾಂ ತೂಕ ಹೊಂದಿತ್ತು.

ಬಳಿಕ ಆತನನ್ನು ಸ್ಥಳೀಯ ಒಸ್ಮಾನಿಯ ಆಸ್ಪತ್ರೆಗೆ ದಾಖಲಿಸಿ, ಚಿನ್ನವನ್ನು ಹೊರ ತೆಗೆಯಲಾಯಿತು. ಕರೀಂ ಕಾನ್‌ನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಘಟನೆಯು ಸುಂಕಾಧಿಕಾರಿಗಳಿಗೆ ಬಾರಿ ಇರುಸುಮುರುಸು ಉಂಟುಮಾಡಿತು.

Write A Comment