ರಾಷ್ಟ್ರೀಯ

ಹಿಂದೂ ಸಂಘಟನೆಗಳನ್ನು ಉಗ್ರ ಹಫೀಜ್ ಸಯ್ಯೀದ್ ಗೆ ಹೋಲಿಕೆ’; ಮರು ಮತಾಂತರ ಮಾಡುತ್ತಿರುವ ಸಂಘಟನೆಗಳ ವಿರುದ್ಧ ಕಾಂಗ್ರೆಸ್ ಮುಖಂಡ ಕಿಡಿ

Pinterest LinkedIn Tumblr

hafiz

ನವದೆಹಲಿ: ಬಲವಂತವಾಗಿ ಮರುಮತಾಂತರ ಮಾಡುತ್ತಿರುವ ಹಿಂದೂ ಸಂಘಟನೆಗಳಿಗೂ ಉಗ್ರ ಹಫೀಜ್ ಸಯ್ಯೀದ್ ನಡುವೆ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ ಹೇಳಿದ್ದಾರೆ.

ಉತ್ತರ ಪ್ರದೇಶದ ಆಗ್ರಾದಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಸುಮಾರು 200 ಜನರನ್ನು ಮರಳಿ ಹಿಂದೂ ಧರ್ಮಕ್ಕೆ ಪರಿವರ್ತಿಸಿರುವ ವಿಚಾರ ವಿವಾದ ರಾಜ್ಯ ಸಭೆ ಕಲಾಪದಲ್ಲಿ ಭಾರೀ ಗದ್ದಲವನ್ನುಂಟು ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನವದೆಹಲಿಯಲ್ಲಿ ನಡೆಯುತ್ತಿರುವ ರಾಜ್ಯ ಸಭಾ ಕಲಾಪದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ, ಆಮಿಷ ತೋರಿಸಿ ಬಡ ಮುಸ್ಲಿಮರನ್ನು ಬಲವಂತವಾಗಿ ಹಿಂದೂ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಹಿಂದೂ ಸಂಘಟನೆಗಳಿಗೂ ಉಗ್ರ ಹಫೀಜ್ ಸಯ್ಯೀದ್‌ಗೂ ಯಾವುದೇ ರೀತಿಯ ವ್ಯತ್ಯಾಸವಿಲ್ಲ.

ಮತಾಂತರಕ್ಕಾಗಿ ಉಗ್ರ ಹಫೀಜ್ ಸಯ್ಯೀದ್ ಏನು ಮಾಡುತ್ತಿದ್ದಾನೋ, ಅದೇ ಕೆಲಸವನ್ನು ಇಂದು ಹಿಂದೂ ಸಂಘಟನೆಗಳು ಮಾಡುತ್ತಿದೆ. ಆದ್ದರಿಂದ ಹಫೀದ್ ಸಯ್ಯಿದ್‌ಗೂ ಹಿಂದೂ ಸಂಘಟನೆಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ.

ಪ್ರಮೋದ್ ತಿವಾರಿ ಅವರ ಈ ಹೇಳಿಕೆಗೆ ಕೆಂಡಾಮಂಡಲವಾದ ಪ್ರತಿಪಕ್ಷಗಳು ಹಫೀಜ್‌ನೊಂದಿಗಿನ ಹೋಲಿಕೆ ಸರಿಯಲ್ಲ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಒತ್ತಾಯಿಸಿದ್ದಾರೆ. ನಂತರ ರಾಜ್ಯಸಭಾ ಉಪಾಧ್ಯಕ್ಷ ಪಿ.ಜೆ.ಕುರಿಯನ್ ಮಾತನಾಡಿ ಪ್ರಮೋದ್ ಮಾತನಾಡುವುದು ಸರಿಯಿದೆ ಆದರೆ ಹಫೀಜ್‌ನೊಂದಿಗಿನ ಹೋಲಿಕೆ ಸರಿಯಲ್ಲ ಎಂದು ಹೇಳಿದ್ದಾರೆ.

Write A Comment