ರಾಷ್ಟ್ರೀಯ

‘ಹನಿಮೂನ್ ಮರ್ಡರ್’ ಶ್ರಿಯನ್ ದೆವಾನಿ ಕೊಲೆಗಾರನಲ್ಲ: ಕೋರ್ಟ್

Pinterest LinkedIn Tumblr

Shrien-Dewani

ಕೇಪ್ ಟೌನ್: ಮಧುಚಂದ್ರದ ವೇಳೆ ಸೆಕ್ಸ್ ನಿರಾಕರಿಸಿದ ಬ್ರಿಟಿಷ್ ಇಂಡಿಯನ್ ಉದ್ಯಮಿ ಶ್ರಿಯನ್ ದೆವಾನಿ ಕೊಲೆಗಾರನಲ್ಲ ಎಂದು ದಕ್ಷಿಣ ಆಫ್ರಿಕಾದ ಕೋರ್ಟ್ ಹೇಳಿದೆ.

2010ರಲ್ಲಿ ಹನಿಮೂನ್ ವೇಳೆ ಇಂಡೋ ಸ್ವೀಡಿಷ್ ಪತ್ನಿ ಅನ್ನಿ ದೆವಾನಿ ಕೊಲೆ ಸಂಚು ಆರೋಪ ಹೊತ್ತಿದ್ದ ದೆವಾನಿಗೆ ಕೋರ್ಟ್ ಆರೋಪ ಮುಕ್ತಗೊಳಿಸಿದೆ.

ಹನಿಮೂನ್ ವೇಳೆ ಸೆಕ್ಸ್ ನಿರಾಕರಿಸುತ್ತಾ ಬಂದ 34ರ ಹರೆಯ ಶ್ರಿಯನ್ ದೆವಾನಿ ಸಲಿಂಗಕಾಮಿ ಎಂಬ ಸತ್ಯ ತಿಳಿದ 28 ವರ್ಷದ ಅನ್ನಿ ದೆವಾನಿ, ಪತಿಯಿಂದ ವಿವಾಹ ವಿಚ್ಛೇದನ ಪಡೆಯಲು ಮುಂದಾಗಿದ್ದಳು. ಆದರೆ ಅಷ್ಟರಲ್ಲೇ ಅನ್ನಿಯ ಕೊಲೆಯಾಗಿತ್ತು.

ಶ್ರಿಯನ್ ತನ್ನ ಸಲಿಂಗಕಾಮಿ ನೆಟ್ವರ್ಕ್ ಬಳಸಿ ಆಕೆಯನ್ನು ಕೊಲೆ ಮಾಡಿಸಿದ್ದಾನೆ ಎಂಬ ಆರೋಪವನ್ನು ಹೊತ್ತಿದ್ದ. ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದ್ದ ಟ್ಯಾಕ್ಸಿ ಚಾಲಕ ಜೋಲಾ ಟಾಂಗೋ ನೀಡಿದ ಹೇಳಿಕೆಗಳು ದೆವಾನಿಯ ಆರೋಪಿಎಂದು ಸಾಬೀತು ಪಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕೋರ್ಟ್ ಶ್ರಿಯನ್ ಕೊಲೆಗಾರನಲ್ಲ ಎಂದು ಹೇಳಿದೆ.

ವಿಚಾರಣೆ ಆರಂಭದಲ್ಲೇ ದೆವಾನಿ ತಾನು ಬೈ ಸೆಕ್ಸುಯಲ್, ಸಲಿಂಗಿ ವಿಟರನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಅದರೆ ನನ್ನ ಪತ್ನಿಯನ್ನು ಕೊಲ್ಲಿಸುವಷ್ಟು ಕ್ರೂರಿಯಲ್ಲ ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು ಹೇಳಿದ್ದ.

ಈ ಪ್ರಕರಣದ ಸಹ ಆರೋರಿಗಳಾದ ಟ್ಯಾಕ್ಸಿ ಚಾಲಕ ಟಾಂಗೋಗೆ 18 ವರ್ಷ ಜೈಲು, ಮಿವಾಮಾಡೊಡಾ ಕ್ವಾಬೆಗೆ 25 ವರ್ಷ ಹಾಗೂ ಜೊಲಿಲೆ ಗೆನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಪೈಕಿ ಗೆನಿ ಜೈಲಿನಲ್ಲೇ ಮೃತಪಟ್ಟಿದ್ದಾನೆ.

ಅನ್ನಿ ಜೊತೆಗೂಡಿ ಕೇಪ್ಟೌನ್ನಲ್ಲಿ ಹನಿಮೂನ್ಗೆ ಬಂದಿದ್ದ. ಆದರೆ ಇಂಗ್ಲೆಂಡ್ಗೆ ಒಬ್ಬನೇ ಮರಳಿದ್ದ. ಅನ್ನಿ ಸೆಕ್ಸ್ ಮನವಿಯನ್ನು ನಿರಾಕರಿಸಿದ ಶ್ರಿಯಾನಿ ಮುಂಬೈನಲ್ಲಿ ಆರತಕ್ಷತೆ ಆದ ಮೇಲೆ ಇದೆಲ್ಲ ಇಟ್ಟುಕೊಳ್ಳೊಣ ಎಂದಿದ್ದ. ಆದರೆ, ಅನ್ನಿಗೆ ತನ್ನ ಪತಿ ಆತನ ಸಲೀಂಗಿ ಗೆಳೆಯನಿಗೆ ಕಳಿಸಿದ್ದ ಸರಸ ಸಂದೇಶಗಳು ಸಿಕ್ಕಿದ್ದವು. ಕೂಡಲೇ ಅನ್ನಿ ವಿಚ್ಛೇದನಕ್ಕೆ ತಯಾರಿ ನಡೆಸಿದ್ದಳು. ಆದರೆ ಮರುದಿನವೇ ಅನ್ನಿ ಕೊಲೆಯಾಗಿತ್ತು.

Write A Comment