ರಾಷ್ಟ್ರೀಯ

ದೆಹಲಿ ರೇಪ್ ಪ್ರಕರಣ: ಕ್ಯಾಬ್ ಡ್ರೈವರ್‌ನ ಬಂಧನ

Pinterest LinkedIn Tumblr

Uber_car_rape_case

ನವದೆಹಲಿ: ಕಾರಿನಲ್ಲಿ ಮಹಿಳೆಯನ್ನು ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಥುರಾ ಪೊಲೀಸರು ಭಾನುವಾರ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು 32 ವರ್ಷದ ಶಿವಕುಮಾರ್ ಯಾದವ್ ಎಂದು ಗುರುತಿಸಲಾಗಿದ್ದು, ಆರೋಪಿ ಶಿವಕುಮಾರ್ ಅಮೆರಿಕ ಮೂಲದ ಉಬರ್ ಕ್ಯಾಬ್ಸ್ ಸಂಸ್ಥೆಯ ಚಾಲಕನಾಗಿದ್ದನು ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಥುರಾ ಪೊಲೀಸರು ತಾಂತ್ರಿಕ ಸಹಾಯದಿಂದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಂಎನ್‌ಸಿ ಸಂಸ್ಥೆಯ ಉದ್ಯೋಗಿಯಾಗಿರುವ ಮಹಿಳೆ ಕಳೆದ ಶುಕ್ರವಾರ ರಾತ್ರಿ ಸ್ನೇಹಿತರೊಂದಿಗೆ ಊಟ ಮುಗಿಸಿ ಗುರ್‌ಗಾವ್‌ಗೆ ವಾಪಸಾಗುತ್ತಿದ್ದರು. ಈ ವೇಳೆ ಉಬರ್ ಸಂಸ್ಥೆಯ ಕಾರನ್ನು ಏರಿದ್ದ ಮಹಿಳೆ ಹಿಂದಿನ ಸೀಟಿನಲ್ಲಿ ನಿದ್ರೆಗೆ ಜಾರಿದ್ದರು. ಇದನ್ನೇ ಅವಕಾಶವಾಗಿ ಬಳಸಿಕೊಂಡ ಚಾಲಕ, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಬಳಿಕ ಕಾರಿನ ಬಾಗಿಲುಗಳನ್ನು ಲಾಕ್ ಮಾಡಿ ಆಕೆಯ ಮೇಲೆರಗಿದ್ದಾನೆ. ಈ ವೇಳೆ ಮಹಿಳೆಗೆ ಎಚ್ಚರವಾಗಿದ್ದು, ಆಕೆಯನ್ನು ಬೆದರಿಸಿದ ಚಾಲಕ ರಾಡ್ ಅನ್ನು ಮರ್ಮಾಂಗಕ್ಕೆ ಇರಿಯುವುದಾಗಿಯೂ ಬೆದರಿಕೆ ಹಾಕಿ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ.

ಕೇವಲ 48 ಗಂಟೆಗಳೊಳಗೇ ಸಿಕ್ಕ ಪಾಪಿ..!

ಅತ್ಯಾಚಾರಕ್ಕೆ ಒಳಗಾದ ಮಹಿಳೆ ತನ್ನ ಬಳಿ ಇದ್ದ ಮೊಬೈಲ್ ಫೋನ್ ತೆಗೆದು ಕಾರಿನಲ್ಲಿ ಪರಾರಿಯಾಗುತ್ತಿದ್ದ ಚಾಲಕ ಮತ್ತು ಆತನ ಕಾರಿನ ಫೋಟೋ ಕ್ಲಿಕ್ ಮಾಡಿ ಪೊಲೀಸರಲ್ಲಿ ದೂರು ನೀಡಿದ್ದಾಳೆ. ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಚಾಲಕ ಉಬರ್ ಸಂಸ್ಥೆಯ ಚಾಲಕನೆಂದು ತಿಳಿದಿದೆ. ಈ ವೇಳೆ ಸಂಸ್ಥೆಗೆ ನೊಟಿಸ್ ನೀಡಿದ ಪೊಲೀಸರು ತನಿಖೆ ಸಹಕರಿಸುವಂತೆ ಸೂಚಿಸಿದ್ದಾರೆ. ಪೊಲೀಸ್ ತನಿಖೆಗೆ ಒಪ್ಪಿದ ಉಬರ್ ಸಂಸ್ಥೆಯು ತನ್ನ ಟ್ಯಾಕ್ಸಿ ಸೇವೆಯ ಆಪ್‌ನ ಮಾಹಿತಿಯನ್ನು ಪೊಲೀಸರಿಗೆ ನೀಡಿದೆ.

ಈ ವ್ಯವಸ್ಥೆಯನ್ನು ಪರಿಣಾಮಕಾಯಾಗಿ ಬಳಿಸಿಕೊಂಡ ಪೊಲೀಸರು ಆರೋಪಿ ಮಥುರಾದಲ್ಲಿರುವುದನ್ನು ಪತ್ತೆ ಮಾಡಿದ್ದಾರೆ. ಅಲ್ಲದೆ ಮಥುರಾ ಪೊಲೀಸರಿಗೆ ಮಾಹಿತಿ ಇಂದು ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment