ರಾಷ್ಟ್ರೀಯ

ಮೋದಿ ಎದುರಿಸಲು ಮತ್ತೆ ಒಂದಾದ ಜನತಾ ಪರಿವಾರ

Pinterest LinkedIn Tumblr

janatha

ನವದೆಹಲಿ: ಕಳೆದ ಲೋಕಸಭೆ ಚುನಾವಣೆ ಹಾಗೂ ಇತ್ತೀಚಿನ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿದ್ದ ಜನತಾ ಪರಿವಾರದ ಪ್ರಾದೇಶಿಕ ಪಕ್ಷಗಳು ಇಂದು ಮತ್ತೆ ಒಂದಾಗಲು ನಿರ್ಧರಿಸಿವೆ.

ಈ ಕುರಿತು ಇಂದು ನಡೆದ ಮ್ಯಾರಾಥಾನ್ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಡಿ(ಯು) ನಾಯಕ ಮತ್ತು ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಮುಖ್ಯಮಂತ್ರಿ ಅಧಿಕೃತವಾಗಿ ಹೇಳಿಕೆ ನೀಡಿದ್ದು, ಸಭೆಯಲ್ಲಿ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರು ಚರ್ಚೆ ನಡೆಸಿದ್ದು, ಹಲವು ನಿಯಮಗಳ ಮೇರೆಗೆ ತಮ್ಮ ಪಕ್ಷಗಳನ್ನು ಜನತಾ ಪರಿವಾರಕ್ಕೆ ಸೇರ್ಪಡೆಗೊಳಿಸಲು ಎಲ್ಲಾ ಪಕ್ಷದ ನಾಯಕರು ಮನಸ್ಸು ಮಾಡಿದ್ದಾರೆ ಎಂದು ಹೇಳಿದ್ದಾರೆ.

ನಮಗೆ ನಮ್ಮದೇ ಆದ ಸೈದ್ದಾಂತಿಕ ಸಿದ್ದಾಂತಗಳಿದ್ದು, ರಾಜಕೀಯದಲ್ಲಿ ಬೆಳೆಯಬೇಕಾದರೆ ವಿರೋಧ ಪಕ್ಷಗಳು ಒಗ್ಗೂಡಿ ಕೆಲಸ ಮಾಡಬೇಕು. ಆಗಲೇ ಪಕ್ಷ ಶಕ್ತಿಶಾಲಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು. ಅಲ್ಲದೆ ಅವರು ಸಭೆಯಲ್ಲಿ ದೇಶದ ದೊಡ್ಡ ಸಮಸ್ಯೆಗಳಾಗಿ ತಲೆದೋರಿರುವ ಕಪ್ಪು ಹಣ, ಅತ್ಯಾಚಾರ, ನಿರುದ್ಯೋಗದಂತಹ ಹತ್ತು ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದು, ಡಿ.22 ರಂದು ದೆಹಲಿಯಲ್ಲಿ ಧರಣಿ ನಡೆಸಲು ಎಲ್ಲಾ ಪಕ್ಷದ ನಾಯಕರು ತೀರ್ಮಾನಿಸಿದ್ದಾರೆ ಎಂದು ತಿಳಿಸಿದ್ದಾರೆ. ಅಂತೂ ಹಲವು ವರ್ಷಗಳ ಹಿಂದೆ ಹರಿದು ಹಂಚಿಹೋಗಿದ್ದ ಜನತಾ ಪರಿವಾರ ಇಂದು ವಿಲೀನಗೊಂಡಿದೆ.

Write A Comment