ರಾಷ್ಟ್ರೀಯ

ಪೋರ್ನ್ ಚಿತ್ರ ವೀಕ್ಷಿಸುವ ಭಾರತೀಯರಲ್ಲಿ ಶೇ. 25ರಷ್ಟು ಮಹಿಳೆಯರು

Pinterest LinkedIn Tumblr

1415949650-4208

ಭಾರತದ ಗಮನಾರ್ಹ ಸಂಖ್ಯೆಯ ಮಹಿಳೆಯರು ಕಾಮಪ್ರಚೋದಕ ಚಿತ್ರಗಳನ್ನು ವೀಕ್ಷಿಸುತ್ತಾರೆ  ಎಂದು ಕ್ವಾರ್ಟ್ಜ್‌ನಲ್ಲಿ ವರದಿ ಪ್ರಕಟವಾಗಿದೆ. ಆನ್‌ಲೈನ್ ನಿಯತಕಾಲಿಕೆ ನಡೆಸಿದ ಅಧ್ಯಯನವು ವಿಶ್ವದ ಅತೀದೊಡ್ಡ ವಯಸ್ಕರ ವೆಬ್‌ಸೈಟ್  ಬಿಡುಗಡೆ ಮಾಡಿದ ದತ್ತಾಂಶವನ್ನು ಆಧರಿಸಿದೆ.

ಭಾರತದ ಮಹಿಳೆಯರಲ್ಲಿ ವಯಸ್ಕ ಚಿತ್ರಗಳನ್ನು ವೀಕ್ಷಿಸುವವರ ಒಟ್ಟು ಶೇಕಡವಾರು ವಿಶ್ವವ್ಯಾಪಿ ಸರಾಸರಿಗಿಂತ ಶೇ. 2ರಷ್ಟು ಹೆಚ್ಚಾಗಿದೆ.  ಕಾಮಪ್ರಚೋದಕ ಚಿತ್ರಗಳನ್ನು ವೀಕ್ಷಿಸುವ ಭಾರತೀಯರ ಆದ್ಯತೆಗಳು ಮತ್ತು ಅಭಿರುಚಿಗಳ ಬಗ್ಗೆ ಈ ಅಧ್ಯಯನವು ಕೆಲವು ಆಸಕ್ತಿದಾಯಕ ಸಂಗತಿಗಳ ಮೇಲೆ ಬೆಳಕು ಚೆಲ್ಲಿದೆ.

ವಯಸ್ಕ ವೆಬ್‌ಸೈಟ್ ಪೋರ್ನ್‌ಹಬ್ ಕ್ಲಿಕ್ ಮಾಡುವುದರಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಪೋರ್ನ್‌ಹಬ್‌ನ 14.2 ಶತಕೋಟಿ ವೀಕ್ಷಕರಲ್ಲಿ ಶೇ.40ರಷ್ಟು ಅಮೆರಿಕ ಮೂಲದವರು. ಭಾರತೀಯರು ಶನಿವಾರದಂದು ಪೋರ್ನ್‌ಹಬ್‌ನಲ್ಲಿ ಸಕ್ರಿಯರಾಗಿದ್ದರೆ, ಭಾನುವಾರ ಕನಿಷ್ಠ ಸಕ್ರಿಯ ದಿನವಾಗಿದೆ.

Write A Comment