ರಾಷ್ಟ್ರೀಯ

“ಇಡೀ ವಿಶ್ವವೇ ಭಾರತದತ್ತ ವಿಶ್ವಾಸ -ಗೌರವಾದರಗಳೊಂದಿಗೆ ನೋಡುತ್ತಿದೆ”

Pinterest LinkedIn Tumblr

modidi

ನವದೆಹಲಿ, ನ.22: ಇಡೀ ವಿಶ್ವವೇ ಭಾರತದತ್ತ ಅಪಾರ ವಿಶ್ವಾಸ ಹಾಗೂ ಗೌರವಾದರಗಳೊಂದಿಗೆ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮ್ಯಾನ್ಮಾರ್, ಆಸ್ಟ್ರೇಲಿಯಾ, ಫೀಜಿ ಮತ್ತಿತರ ದೇಶಗಳಿಗೆ ಭೇಟಿ ನೀಡಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಭಾರತಕ್ಕೆ ಮರಳಿರುವ ಮೋದಿ, ತಮ್ಮ ಬ್ಲಾಗ್‌ನಲ್ಲಿ ಪ್ರವಾಸದ ವೇಳೆಯ ಅನುಭವಗಳನ್ನು ಬರೆದುಕೊಂಡಿದ್ದಾರೆ.

ಕಪ್ಪುಹಣದ ವಿರುದ್ಧ ಜಿ-20 ಶೃಂಗ ರಾಷ್ಟ್ರಗಳು ಒಟ್ಟಾಗಿ ಕೈ ಜೋಡಿಸಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಕಪ್ಪುಹಣ ವಿಶ್ವದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯುಂಟುಮಾಡಲಿದೆ ಎಂದು ಅಭಿಪ್ರಾಯಿಸಿದ್ದಾರೆ.

ತಮ್ಮ 10 ದಿನಗಳ ಪ್ರವಾಸದಲ್ಲಿ 38 ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿದ್ದು, 20 ರಾಷ್ಟ್ರಗಳ ನಾಯಕರ ಜತೆ ನೇರಾತಿನೇರ ಸಂವಾದ ನಡೆಸಿದ್ದೇನೆ. ಆ ವೇಳೆ ನನಗೆ ಮನವರಿಕೆಯಾಗಿದ್ದೆಂದರೆ ಇಡೀ ವಿಶ್ವವೇ ಭಾರತದತ್ತ ಬೆರಗಿನಿಂದ ನೋಡುತ್ತಿದೆ. ಅಪಾರ ವಿಶ್ವಾಸ ಮತ್ತು ಗೌರವಾದರಗಳಿಂದ ಭಾರತದ ನಾಯಕತ್ವವನ್ನು ನಿರೀಕ್ಷಿಸುತ್ತಿದೆ. ಮೇಕ್ ಇನ್ ಇಂಡಿಯಾ ತಮ್ಮ ಅಭಿಯಾನಕ್ಕೆ ವಿಶ್ವದ ವಿವಿಧ ನಾಯಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Write A Comment