ರಾಷ್ಟ್ರೀಯ

ಎಎಪಿ ಮುಖಂಡ, ದೆಹಲಿ ಮಾಜಿ ಸ್ಪೀಕರ್ ಧೀರ್ ಬಿಜೆಪಿಗೆ ಸೇರ್ಪಡೆ

Pinterest LinkedIn Tumblr

MS-Dhir

ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ(ಎಎಪಿ) ಟಿಕೆಟ್ ನಿರಾಕರಿಸಿದರಿಂದ ಮಾಜಿ ದೆಹಲಿ ಸ್ಪೀಕರ್ ಎಂ.ಎಸ್ ಧೀರ್ ಅವರು ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಧೀರು ಅವರು, ದೆಹಲಿ ಜನತೆ ಸರ್ಕಾರ ನಡೆಸಲು ಎಎಪಿಗೆ ಅವಕಾಶ ನೀಡಿದ್ದರು. ಆದರೆ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಎಪಿ ವಿಫಲವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ದೂರಿದರು.

ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದು ಅವರ ಪ್ರಭಾವಿದಿಂದಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದರು. ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಉತ್ತಮ ಕೆಲಸಗಳನ್ನು ಮಾಡಲಿದೆ ಎಂದರು.

ದಕ್ಷಿಣ ದೆಹಲಿಯ ಜಂಗ್‌ಪುರ ಕ್ಷೇತ್ರದ ಶಾಸಕರಾಗಿದ್ದ ಅವರು ಈ ಹಿಂದೆ ದೆಹಲಿಯಲ್ಲಿ ಎಎಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸ್ಪೀಕರ್ ಆಗಿ ಕೆಲಸ ಮಾಡಿದ್ದರು.

Write A Comment