ರಾಷ್ಟ್ರೀಯ

ಶಾರದ ಚಿಟ್‌ಫಂಡ್ ಹಗರಣ: ಟಿಎಂಸಿ ಸಂಸದನ ಬಂಧನ

Pinterest LinkedIn Tumblr

SrinjoyBose

ಕೊಲ್ಕತಾ: ಕೊಲ್ಕತಾದ ಶಾರದ ಗ್ರೂಪ್ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದ ಹಾಗೂ ಮಮತಾ ಬ್ಯಾನರ್ಜಿ ಆಪ್ತನನ್ನು ಸಿಬಿಐ ಶುಕ್ರವಾರ ಬಂಧಿಸಿದೆ.

ಟಿಎಂಸಿ ಸಂಸದ ಶ್ರಿಂಜಾಯ್ ಬೋಸ್‌ನನ್ನು ಸಿಬಿಐ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಧಿಸಿದಂತೆ ಈವರೆಗೆ ಅನೇಕ ಟಿಎಂಸಿ ನಾಯಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಬಂಧನಕ್ಕೊಳಗಾದ ಟಿಎಂಸಿ ನಾಯಕರಲ್ಲಿ ಶ್ರಿಂಜನ್ ಬೋಸ್ ಎರಡನೇ ವ್ಯಕ್ತಿ.

ಶಾರದ ಗ್ರೂಪ್ ಚಿಟ್‌ಫಂಡ್ ಕಂಪನಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಂನಲ್ಲಿ ಲಕ್ಷಾಂತರ ಜನರಿಗೆ 25,000 ಕೋಟಿ ರು. ವಂಚನೆ ಮಾಡಿತ್ತು. ಈ ಹಗರಣದಲ್ಲಿ ಅನೇಕ ರಾಜಕೀಯ ಪ್ರತಿನಿಧಿಗಳ ಹೆಸರು ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಸಿಬಿಐ ತನಿಖೆ ಕೈಗೊಂಡಿತ್ತು.

Write A Comment