ರಾಷ್ಟ್ರೀಯ

ಮುಂದೊಂದು ದಿನ ನಾನು ಪ್ರಧಾನಮಂತ್ರಿಯಾಗುವೆ? ಬಿಹಾರ ಸಿಎಂ

Pinterest LinkedIn Tumblr

Jitan-ram-Manjhi

ಪಾಟ್ನಾ: ಮುಂದೊಂದು ದಿನ ನಾನು ಈ ದೇಶದ ಪ್ರಧಾನಮಂತ್ರಿಯಾಗಬಹುದು ಎಂದು ಬಿಹಾರ ಸಿಎಂ ಜಿತನ್ ರಾಮ್ ಮಂಝಿ ಅವರು ಬುಧವಾರ ಹೇಳಿದ್ದಾರೆ.

ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಝಿ ಅವರು, ನಾನು ಬಿಹಾರದ ಮುಖ್ಯಮಂತ್ರಿಯಾದಂತೆ ಮುಂದೆ ಒಂದು ದಿನ ಈ ದೇಶದ ಪ್ರಧಾನಿಯಾಗಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಮಹಾದಲಿತ ಸಮುದಾಯದಿಂದ ಬಂದವನೆಂಬ ಕಾರಣಕ್ಕಾಗಿ ಪ್ರತಿಯೊಬ್ಬರು ನನ್ನನ್ನು ಸುಖಾಸುಮ್ಮನೆ ಗುರಿಯಾಗಿರಿಸಿಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾದಾಗ ಪ್ರಬಲ ವ್ಯಕ್ತಿಗಳು ನನ್ನ ವಿರುದ್ಧ ಕೇಕೆ ಹಾಕಿ ನಕ್ಕಿದ್ದರು. ಅಲ್ಲದೆ ನನ್ನನ್ನು ಹಾಡಿಕೊಂಡಿದ್ದರು. ಇವರೆಲ್ಲ ಇದೇ ರೀತಿ ನನ್ನನ್ನು ಗುರಿಯಾಗಿರಿಸಿಕೊಂಡರೆ ಮುಂದೊಂದು ದಿನ ನಾನು ಪ್ರಧಾನಮಂತ್ರಿಯಾಗುತ್ತೇನೆ ಎಂದರು.

ದಲಿತ ಕುಟುಂಬದಲ್ಲಿ ಹುಟ್ಟಿರುವುದು ನನ್ನ ತಪ್ಪೇ ಈ ಜನ ಯಾಕೆ ನನ್ನನ್ನು ಗೇಲಿ ಮಾಡುತ್ತಿದ್ದಾರೆ ಎಂದರು.

Write A Comment