ಕರ್ನಾಟಕ

ಇನ್ಫೊಸಿಸ್‌ನ ನೂತನ ಸಿಇಒ ಅನೂಪ್‌

Pinterest LinkedIn Tumblr

infosi

ಬೆಂಗಳೂರು(ಐಎಎನ್‌ಎಸ್‌): ಅನೂಪ್‌ ಉಪಾಧ್ಯಾಯ ಅವರು ಇನ್ಫೊಸಿಸ್‌ನ ಹೊಸ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಬುಧವಾರ ನೇಮಕಗೊಂಡಿದ್ದಾರೆ. ನವೆಂಬರ್‌ 30 ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ಕಂಪೆನಿಯ ಹೊರಗುತ್ತಿಗೆ (ಬಿಪಿಒ)  ಘಟಕದ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ದೀಪಕ್‌ ಭಲ್ಲಾ ಅವರಿಗೆ ಬಡ್ತಿ ನೀಡಲಾಗಿದೆ.

ಅನೂಪ್‌ ಅವರು ಕಳೆದ ಎರಡು ದಶಕಗಳಿಂದ ಇನ್ಫೊಸಿಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಂಪೆನಿಯ ಹಣಕಾಸು ಸೇವೆಗಳ ಜಾಗತಿಕ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.

‘ಬಿಪಿಒ’ ಘಟಕದ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ  ಅಬ್ರಹಾಂ ಮ್ಯಾಥ್ಯೂಸ್‌ ಅವರನ್ನು ನಡವಳಿಕೆ ಸರಿ ಇಲ್ಲದ ಕಾರಣಕ್ಕಾಗಿ ಕಂಪೆನಿ ಮಂಗಳವಾರ ವಜಾಗೊಳಿಸಿತ್ತು. ನೈತಿಕ ಹೊಣೆ ಹೊತ್ತು ‘ಸಿಇಒ’ ಗೌತಮ್‌ ಥಕ್ಕರ್‌ ಕೂಡ ರಾಜೀನಾಮೆ ಸಲ್ಲಿಸಿದ್ದರು. ತೆರವುಗೊಂಡ ಈ ಎರಡು ಹುದ್ದೆಗಳನ್ನು ಅನೂಪ್ ಮತ್ತು ಭಲ್ಲಾ  ಅಲಂಕರಿಸಿದ್ದಾರೆ.

ಉಪಾಧ್ಯಾಯ ಮತ್ತು ಭಲ್ಲಾ  ಜೋಡಿಯು  ಕಂಪೆನಿಯನ್ನು ಮಾದರಿ ಪಥದಲ್ಲಿ ಮುನ್ನಡೆಸಲಿದೆ ಎಂದು ಕಂಪೆನಿಯ ವ್ಯಸ್ಥಾಪಕ ನಿರ್ದೇಶಕ ಸಿಕ್ಕಾ ಅಭಿಪ್ರಾಯಪಟ್ಟಿದ್ದಾರೆ.

Write A Comment