ರಾಷ್ಟ್ರೀಯ

ಶೌಚಾಲಯ: ಭಾರತೀಯರಿಗೆ ಬಯಲೇ ಪ್ರಿಯ!

Pinterest LinkedIn Tumblr

Sanitation

ವಿಶ್ವಸಂಸ್ಥೆ (ಪಿಟಿಐ): ವಿಶ್ವದಲ್ಲಿ ಬಯಲು ಶೌಚಾಲಯವನ್ನು ಅವಲಂಬಿಸಿರುವವರ ಸಂಖ್ಯೆ ಭಾರತದಲ್ಲಿಯೇ ಹೆಚ್ಚಿದೆ. ದೇಶದ ಜನಸಂಖ್ಯೆಯ ಶೇಕಡಾ 47 ರಷ್ಟು ಜನರು ಶೌಚಕ್ಕಾಗಿ ಬಯಲನ್ನು ಆಶ್ರಯಿಸಿದ್ದಾರೆ ಎಂದು ವಿಶ್ವ ಸಂಸ್ಥೆಯ ವರದಿ ಹೇಳಿದೆ.

ನವೆಂಬರ್ 19ರ ದಿನವನ್ನು ‘ವಿಶ್ವ ಶೌಚಾಲಯ ದಿನ’ ಎಂದು ಘೋಷಿಸಿರುವ ವಿಶ್ವಸಂಸ್ಥೆ, ಈ ಸವಾಲನ್ನು ಎದುರಿಸಲು ‘ಉನ್ನತ ಮಟ್ಟ’ದ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ ಎಂದೂ ಅಭಿಪ್ರಾಯ ಪಟ್ಟಿದೆ.

ವಿಶ್ವಸಂಸ್ಥೆ ಪ್ರಕಾರ, ಪ್ರಪಂಚದಾದ್ಯಂತ್ಯ ಸುಮಾರು 2.5 ಶತಕೋಟಿಯಷ್ಟು ಜನರು ಸುಧಾರಿತ ನೈರ್ಮಲೀಕರಣ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಸುಮಾರು ಒಂದು ಶತಕೋಟಿಯಷ್ಟು ಜನರು ಶೌಚಾಲಯಗಳನ್ನು ಬಳಸುವುದಿಲ್ಲ. ಅದರಲ್ಲಿ ಶೇ 82 ರಷ್ಟು ಅಂದರೆ ಸುಮಾರು 82 ಕೋಟಿಯಷ್ಟು ಜನರಿಗೆ ಬಯಲು ಶೌಚಾಲಯದ ಅಭ್ಯಾಸವಿದೆ.

ಭಾರತ ಅಗ್ರ ಸ್ಥಾನದಲ್ಲಿದ್ದು, ಇಂಡೋನ್ಯೇಷ್ಯಾ (5.4 ಕೋಟಿ), ಪಾಕಿಸ್ತಾನ (4.1ಕೋಟಿ), ನೇಪಾಳ (1.1ಕೋಟಿ) ಹಾಗೂ ಚೀನಾ (1 ಕೋಟಿ) ರಾಷ್ಟ್ರಗಳು ನಂತರದ ಸ್ಥಾನದಲ್ಲಿವೆ.

ನಾಲ್ಕನೇ ಸ್ಥಾನದಲ್ಲಿ ಬೆಂಗಳೂರು (ನವದೆಹಲಿ/ಪಿಟಿಐ ವರದಿ): ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಅತ್ಯಂತ ಕೆಟ್ಟ ನಗರಗಳ ಪಟ್ಟಿಯಲ್ಲಿ ಪ್ರವಾಸಿಗರ ತಾಣ ಕೋಲ್ಕತ್ತ ಮೊದಲ ಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ನೈರ್ಮಲ್ಯ ಸೌಲಭ್ಯಗಳನ್ನು ಸುಧಾರಿಸಬೇಕಿರುವ ಪಟ್ಟಿಯಲ್ಲಿ ಶೇ 74 ರಷ್ಟು ಮಂದಿ ಕೋಲ್ಕತ್ತ ನಗರವನ್ನುಮೊದಲ ಸ್ಥಾನದಲ್ಲಿ ಇರಿಸಿದ್ದಾರೆ. ನಂತರದ ಸ್ಥಾನ ದೇಶದ ವಾಣಿಜ್ಯ ನಗರಿ ಮುಂಬೈನದ್ದು (ಶೇ 72 ರಷ್ಟು).

ದಕ್ಷಿಣ ಭಾರತದ ನಗರಗಳಾದ ಚೆನ್ನೈ (ಶೇ 71ರಷ್ಟು) ಹಾಗೂ ಬೆಂಗಳೂರು (ಶೇ 53ರಷ್ಟು) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಖಾಸಗಿ ಪ್ರವಾಸಿ ವೆಬ್‌ತಾಣ ಹಾಲಿಡೇಐಕ್ಯೂಡಾಟ್ ಕಾಮ್ ದೇಶದ ಏಳು ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತ, ಚೆನೈ, ಬೆಂಗಳೂರು, ಪುಣೆ ಹಾಗೂ ಹೈದರಾಬಾದ್‌ನಲ್ಲಿ ಸುಮಾರು 10 ಸಾವಿರ ಜನರನ್ನು ಸಂಪರ್ಕಿಸಿ ಈ ಸಮೀಕ್ಷೆ ನಡೆಸಿತ್ತು.

Write A Comment