ಅಂತರಾಷ್ಟ್ರೀಯ

ಗಲ್ಲಿಗೆ ಗುರಿಯಾಗಿದ್ದ ಮೀನುಗಾರರು ಬಿಡುಗಡೆ

Pinterest LinkedIn Tumblr

fish

ಕೊಲಂಬೊ (ಪಿಟಿಐ): ಮಾದಕ ವಸ್ತುಗಳ ಕಳ್ಳಸಾಗಣೆ ಮಾಡಿದ ಆಪಾದನೆಯಡಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಐವರು ಭಾರ­ತೀಯ ಮೀನುಗಾರರ ಶಿಕ್ಷೆಯನ್ನು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಜೀವಾವಧಿಗೆ ಪರಿವರ್ತಿಸಿದ್ದು, ಅವರು ಬುಧವಾರ ಬಿಡುಗಡೆಯಾಗಿದ್ದಾರೆ.

ಐವರು ಮೀನುಗಾರರನ್ನು ಮುಂದಿನ ಕ್ರಮಕ್ಕಾಗಿ ವಲಸೆ ಅಧಿಕಾರಗಳಿಗೆ ಒಪ್ಪಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

2011ರಲ್ಲಿ ಉತ್ತರ ಜಾಫ್ನಾದ ಕಡಲಲ್ಲಿ ಶ್ರೀಲಂಕಾ ನೌಕಾಪಡೆಯು ತಮಿಳು­­ನಾಡಿನ ಮೂಲದ ಐವರು ಮೀನು­ಗಾ­­ರರಾದ ಎಮರ್ಸನ್‌, ಪಿ. ಅಗಸ್ಟಸ್‌, ಆರ್‌. ವಿಲ್ಸನ್‌, ಕೆ. ಪ್ರಸತ್‌ ಮತ್ತು ಜೆ. ಲಾಂಗ್ಲೆಟ್‌ ಅವರನ್ನು ಮಾದಕ ವಸ್ತು­ಗಳ ಕಳ್ಳಸಾ­ಗಣೆ ಆರೋಪದಡಿ ಬಂಧಿಸಿತ್ತು.

ಬಳಿಕ ಆರೋಪ ಸಾಬೀತಾ­ಗಿದೆ ಎಂದು ಹೇಳಿದ್ದ ಕೊಲಂಬೊ ಹೈಕೋರ್ಟ್ ನ್ಯಾಯ­ಮೂರ್ತಿ ಪ್ರೀತಿ ಪದ್ಮನ್ ಸುರ­ಸೇನಾ, ಹೋದ ತಿಂಗಳು 30ರಂದು (ಅಕ್ಟೋಬರ್) ಐವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದರು.

ಗಲ್ಲು ಶಿಕ್ಷೆ ತೀರ್ಪು ಹೊರ ಬೀಳುತ್ತಿದ್ದಂತೆಯೇ ತಮಿಳುನಾಡಿನ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ರಾಮೇಶ್ವರದ ಬಳಿ ಸಾಕಷ್ಟು ಜನರು ಪ್ರತಿಭಟನೆ ನಡೆಸಿದ್ದರು.

ಹೈಕೋರ್ಟ್ ತೀರ್ಪು ಪ್ರಶ್ನಿಸಿ ಭಾರತ ಸರ್ಕಾರ ನವೆಂಬರ್ 11 ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜಪಕ್ಸೆ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು.

Write A Comment