ರಾಷ್ಟ್ರೀಯ

ಹೈದರಾಬಾದ್‍ನಲ್ಲಿ ಶಂಕಿತ ಉಗ್ರನ ಬಂಧನ

Pinterest LinkedIn Tumblr

Terror--II

ಹೈದರಾಬಾದ್, ನ.18: ಪಶ್ಚಿಮ ಬಂಗಾಳದ ಬುದ್ರ್ವಾನ್‍ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‍ಐಎ)ದ ಅಧಿಕಾರಿಗಳು ಹೈದರಾಬಾದ್‍ನಲ್ಲಿ ಶಂಕಿತ ಉಗ್ರನನ್ನು ಇಂದು ಬೆಳಗ್ಗೆ ಬಂಧಿಸಿದ್ದಾರೆ. ಮಾಯನ್‍ಮಾರ್-ಬಾಂಗ್ಲಾ ಗಡಿಯಲ್ಲಿ ಉಗ್ರರ ಶಿಬಿರಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ಬರ್ಮಾ ದೇಶದ ಖಲೀದ್ ಎಂಬಾತನನ್ನು ಶಂಕೆಯ ಮೇರೆಗೆ ಎನ್‍ಐಎ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬಂಧಿತ ಖಲೀದ್ ಭಾರತದಲ್ಲಿ ದುಷ್ಕøತ್ಯ ನಡೆಸಲು ಮಾಯನ್‍ಮಾರ್-ಬಾಂಗ್ಲಾ ಗಡಿಯಲ್ಲಿ ಉಗ್ರರ ಶಿಬಿರಗಳನ್ನು ತೆರೆದಿದ್ದ. ಅಲ್ಲದೆ ಈತ ಉಗ್ರರಿಗೆ ಅಗತ್ಯ ಬಾಂಬ್, ಸುಧಾರಿತ ಬಂದೂಕುಗಳನ್ನು ತಯಾರಿಸುವುದರಲ್ಲಿ ನಿಪುಣನಾಗಿದ್ದನೆಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ಪಾಕಿಸ್ತಾನ ಮೂಲದ ತೆಹ್ರಿಕ್-ಇ-ತಾಲಿಬಾನ್ ಮೂಲದ ಉಗ್ರಗಾಮಿ ಸಂಘಟನೆ ಜೊತೆ ಈತ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಅಲ್ಲದೆ ಇರಾಕ್‍ನಲ್ಲಿ ಐಎಸ್‍ಐಎಸ್ ಉಗ್ರಗಾಮಿ ಸಂಘಟನೆಗಳಿಗೆ ಉಗ್ರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದ.

ಭಯೋತ್ಪಾದನೆ ಬಗ್ಗೆ ಒಲವು ಹೊಂದಿರುವ ಯುವಕರನ್ನು ಸೇರ್ಪಡೆ ಮಾಡಿಕೊಳ್ಳಲು ಈತ ಕಾರ್ಯೋನ್ಮುಖವಾಗಿದ್ದ. ಕೆಲವು ಮುಸ್ಲಿಂ ಯುವಕರನ್ನು ಇದರತ್ತ ಸೆಳೆಯಲು ಅವರಿಗೆ ವಿಶೇಷ ಉಪನ್ಯಾಸ ನೀಡಲು ಶಿಬಿರಗಳನ್ನು ಆಯೋಜಿಸುತ್ತಿದ್ದ. ಈತನ ಚಲನವಲನಗಳ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದ ಎನ್‍ಐಎ ಅಧಿಕಾರಿಗಳು ಹೈದರಾಬಾದ್‍ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರ ಕೊಲ್ಕತ್ತಾದ ಎನ್‍ಐಎ ಕಚೇರಿ ಬಳಿ ಉಗ್ರರು ಕಚ್ಚಾ ಬಾಂಬ್ ಸ್ಫೋಟಿಸಲು ವಿಫಲ ಪ್ರಯತ್ನ ನಡೆಸಿದ್ದರು. ಅಧಿಕಾರಿಗಳು ಮತ್ತು ಜನರಲ್ಲಿ ಭಯಭೀತಿ ವಾತಾವರಣ ನಿರ್ಮಿಸುವುದು ಇದರ ಉದ್ದೇಶವಾಗಿತ್ತು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಹಲವರು ಶಂಕಿತ ಉಗ್ರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Write A Comment