ನವದೆಹಲಿ: ಜೀವ ಬೆದರಿಕೆ ಹಿನ್ನೆಲೆಯಲ್ಲಿ ವಿವಾದಾತ್ಮಕ ಯೋಗ ಗುರು ಬಾಬಾ ರಾಮ್‌ದೇವ್‌ಗೆ ಪ್ರತಿಷ್ಠಿತ ಝ ಶ್ರೇಣಿಯ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ.
ಬಾಬಾ ರಾಮ್‌ದೇವ್‌ಗೆ ಜೀವ ಬೆದರಿಕೆಯಿದೆ ಎಂಬ ಭದ್ರತಾ ಸಂಸ್ಥೆಗಳ ಮಾಹಿತಿಯನ್ವಯ ಕೇಂದ್ರ ಗೃಹ ಸಚಿವಾಲಯ ಸೂಕ್ತ ಭದ್ರತೆ ಒದಗಿಸುವ ಹಿನ್ನೆಲೆಯಲ್ಲಿ ದೇಶದ ಗಣ್ಯರಿಗೆ ನೀಡುವ ಝ ಶ್ರೇಣಿಯ ಭದ್ರತೆಯನ್ನು ರಾಮ್‌ದೇವ್‌ಗೆ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಮ್‌ದೇವ್‌ರನ್ನು ಸದ್ಯ 40 ಮಂದಿ ಕಮಾಂಡೋಗಳು ರಕ್ಷಣೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ರಾಮ್‌ದೇವ್‌ಗೆ ನೀಡಿರುವ ಝ ಶ್ರೇಣಿ ಭದ್ರತೆ ಉತ್ತರಖಂಡ್ ರಾಜ್ಯದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೆ.
ವಿದೇಶಗಳಲ್ಲಿ ಇಟ್ಟಿರುವ ಕಪ್ಪುಹಣವನ್ನು ಭಾರತಕ್ಕೆ ತರುವಂತೆ ಬಾಬಾ ರಾಮ್‌ದೇವ್ ಅವರು ಹಲವು ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದಾರೆ. ಅಲ್ಲದೆ ಅಕ್ರಮವಾಗಿ ಕಪ್ಪುಹಣವನ್ನು ಕೂಡಿಟ್ಟಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.