ರಾಷ್ಟ್ರೀಯ

ಸರ್ಕಾರಿ ಮನೆ ಖಾಲಿ ಮಾಡಲು ಚಿರಂಜೀವಿಗೆ ನೊಟೀಸ್

Pinterest LinkedIn Tumblr

chiranjeevi

ನವದೆಹಲಿ: ಸರ್ಕಾರಿ ಮನೆಯನ್ನು ಖಾಲಿ ಮಾಡದೆ, ಕೇಂದ್ರ ಸರ್ಕಾರರೊಂದಿಗೆ ಜಟಾಪಟಿ ನಡೆಸುತ್ತಿದ್ದಾರೆ ಮಾಜಿ ಕೇಂದ್ರ ಸಚಿವರಾಗಿರುವ ನಟ ಚಿರಂಜೀವಿ.

ಹಿಂದಿನ ಕಾಂಗ್ರೆಸ್ ಸರ್ಕಾರ, ಕೇಂದ್ರ ಸಚಿವರಾಗಿದ್ದಾಗ ಚಿರಂಜೀವಿ ಅವರಿಗೆ ದೆಹಲಿಯಲ್ಲಿ ಸರ್ಕಾರಿ ಮನೆಯನ್ನು ಮೀಸಲಿಟ್ಟಿತು. ಆದರೆ ಇದೀಗ ಕೇಂದ್ರ ಸರ್ಕಾರ ಬದಲಾವಣೆಯಾಗಿದ್ದರೂ, ಮಾಜಿ ಸಚಿವ ಚಿರಂಜೀವಿ ಸರ್ಕಾರಿ ಮನೆ ಖಾಲಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಚಿರಂಜೀವಿ ಮಾತ್ರವಲ್ಲ, ಮತ್ತೆ ನಾಲ್ವರು ಮಾಜಿ ಕೇಂದ್ರ ಸಚಿವರು ಸಹ ಮನೆ ಖಾಲಿ ಮಾಡದೆ ಜಟಾಪಟಿ ಮುಂದುವರೆಸಿದ್ದಾರೆ.

ಇದರಿಂದ ಸಿಟ್ಟಾಗಿರುವ ಕೇಂದ್ರ ಸರ್ಕಾರ, ಮಾಜಿ ಸಚಿವರುಗಳಾದ ಚಿರಂಜೀವಿ, ವಯಲಾರ್ ರವಿ, ರಾಜೀವ್ ಶುಕ್ಲಾ, ಕೆ.ಎಚ್.ಮುನಿಯಪ್ಪ ಹಾಗೂ ಅದಿರಂಜನ್ ಚೌದರಿ ಅವರಿಗೆ, ಅತಿ ಶೀಘ್ರದಲ್ಲಿ ಮನೆ ಖಾಲಿ ಮಾಡುವಂತೆ ನೊಟೀಸ್ ಜಾರಿಗೊಳಿಸಿದೆ.

ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಿರುವುದರಿಂದ, ನೂತನ ಸಚಿವರಿಗೆ ಮನೆಗಳನ್ನು ಮೀಸಲಿಡುವುದು ಅನಿವಾರ್ಯವಾಗಿದ್ದು, ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

ಆದರೆ ಚಿರಂಜೀವಿ ಕೇಂದ್ರ ಸರ್ಕಾರದ ಮನವೋಲೈಕೆಗೆ ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ನೊಟೀಸಿಗೆ ಉತ್ತರಿಸಿರುವ ಚಿರಂಜೀವಿ, ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಮನೆ ಮೀಸಲಾತಿ ಕುರಿತು ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಸರ್ಕಾರ ದೆಹಲಿಯಲ್ಲಿನ ತುಘಲಕ್ ವಸತಿ ನಿಲಯವನ್ನು ತೋರಿಸಿತ್ತಾದರೂ, 3 ವರ್ಷಗಳಿಂದ ಆ ಮನೆಯಲ್ಲಿ ಯಾರು ವಾಸವಾಗಿರಲಿಲ್ಲ. ಅಲ್ಲದೆ ವಸತಿ ನಿಲಯ ಮೀಸಲಾತಿಯಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಚಿರಂಜೀವಿ ಅಸಮಾಧಾನ ವ್ಯಕ್ತಪಡಿಸಿದರು.

Write A Comment