ರಾಷ್ಟ್ರೀಯ

ಮೇಲ್ಜಾತಿ ಜನರು ವಿದೇಶಿಯರು: ಸಿಎಂ ಮಾಂಜಿ ಹೇಳಿಕೆಗೆ ಬಿಜೆಪಿ ಕಿಡಿ

Pinterest LinkedIn Tumblr

Jitan-Ram-Manjhi

ಪಾಟ್ನಾ: ಮೇಲ್ಜಾತಿ ಜನರು ವಿದೇಶಿಯರು ಎಂದು ಹೇಳುವ ಮೂಲಕ ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರು ಜಾತಿ ಉದ್ವಿಗ್ನತೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಮಾಂಜಿ ಹೇಳಿಕೆ ಹಲವರ ಕಣ್ಣನ್ನು ಕೆಂಪಾಗಿಸಿವೆ. ಮೇಲ್ಜಾತಿ ಜನರ ಜನಾಂಗೀಯತೆ ಪ್ರಶ್ನಿಸುವುದರ ಮೂಲಕ ಸಮಾಜದ ವಿವಿಧ ವಿಭಾಗಗಳ ನಡುವೆ ವಿಷ ಬೀಜ ಬಿತ್ತಲು ಬಿಹಾರ್ ಸಿಎಂ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿಯ ಸುಶೀಲ್ ಮೋದಿ ಆರೋಪಿಸಿದ್ದಾರೆ.

“ಮಾಂಜಿ ಈ ರೀತಿಯ ಪ್ರಮಾದಗಳನ್ನು ಎಸಗುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಕೂಡ ಅವರು ಸಾಮಾಜಿಕ ನೆಲೆಯಲ್ಲಿ ಜನರನ್ನು ವಿಭಾಗಿಸಲು ನೋಡಿದ್ದರು” ಎಂದು ಬಿಜೆಪಿ ನಾಯಕ ಕಿಡಿಕಾರಿದ್ದಾರೆ.

ಕಳೆದ ಮಂಗಳವಾರ ಬೆಟ್ಟೈನಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಾಂಜಿ, ಮೇಲ್ಜಾತಿಯ ಜನರು ವಿದೇಶಿಗರು ಮತ್ತು ಆರ್ಯನ್ ಜನಾಂಗದ ವಂಶಸ್ಥರು. ಅವರು ಅನ್ಯ ದೇಶದಿಂದ ಬಂದವರಾಗಿದ್ದಾರೆ. ಕೇವಲ ಬುಡಕಟ್ಟು ಜನಾಂಗದವರು ಮತ್ತು ದಲಿತರು ಇಲ್ಲಿನ ಮೂಲ ನಿವಾಸಿಗಳು ಎಂಬ ಹೇಳಿಕೆ ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದರು.

ಮುಖ್ಯಮಂತ್ರಿಗಳ ಭಾಷಣ ನೆರೆದವರಿಗೆ ಅರಿವನ್ನು ಮೂಡಿಸುವುದಾಗಿತ್ತು ಮತ್ತು ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಸರಕಾರವನ್ನು ರಚಿಸುವಲ್ಲಿ ಜನರು ಹೇಗೆ ಪ್ರಮುಖ ಪಾತ್ರವನ್ನು ವಹಿಸಬಲ್ಲರು ಎಂಬುದನ್ನು ಮನವರಿಕೆ ಮಾಡುವುದಾಗಿತ್ತು ಎಂದು  ಜೆಡಿಯು ತಮ್ಮ ನಾಯಕನ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ.

Write A Comment