ಮಾದಕ ವಸ್ತು ಸಾಗಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಬಾಲಿವುಡ್‌ನ ನಟಿ ಮಮತಾ ಕುಲಕುರ್ಣಿ ಮತ್ತು ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಿವುಡ್‌ನಲ್ಲಿ ಕೆಲವೇ ಚಿತ್ರಗಳಲ್ಲಿ ನಟಿಸಿದ್ದ ಮಮತಾ ಕುಲಕರ್ಣಿ ಹಾಗೂ ಆಕೆಯ ಪತಿ ವಿಕ್ಕಿ ಗೋಸ್ವಾಮಿಯನ್ನು ಮಾದಕ ವಸ್ತು ಸಾಗಣಿಕೆ ಮಾಡುತ್ತಿದ್ದ ಆರೋಪದ ಮೇಲೆ ಕೀನ್ಯಾದ ಪೊಲೀಸರು ಬಂಧಿಸಿದ್ದಾರೆ.
ಈ ಮೊದಲು 1997ರಲ್ಲಿ ವಿಕ್ಕಿ ಗೋಸ್ವಾಮಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ದುಬೈನ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದನು. 2012ರಲ್ಲಿ ಜೈಲಿನಿಂದ ಹೊರಬಂದ ಈತ ಮಮತಾ ಕುಲಕರ್ಣಿಯನ್ನು ವರಿಸಿದ್ದನು.
ಪ್ರಸ್ತುತ ಈ ದಂಪತಿ ಕೀನ್ಯಾದ ನೈರೋಬಿಯಾದಲ್ಲಿ ಬೀಡೂರಿದ್ದರು. 42 ವರ್ಷದ ಮಮತಾ 90 ದಶಕದಲ್ಲಿ ಬಾಲಿವುಡ್‌ನಲ್ಲಿ ನಟಿಯಾಗಿ ಮಿಂಚಿದ್ದಳು. 1998ರಲ್ಲಿ ಬಿಡುಗಡೆಯಾದ ಆಕೆಯ ಕಡೆಯ ಬಾಲಿವುಡ್ ಚಿತ್ರ ‘ಚೈನಾ ಗೇಟ್’ ಅಭಿಮಾನಿಗಳ ಮನಗೆಲ್ಲುವಲ್ಲಿ ವಿಫಲವಾಯಿತು. ತದ ನಂತರ ಎರಡು-ಮೂರು ಚಿತ್ರಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಪಾತ್ರ ಮಾಡಿ, ಬಾಲಿವುಡ್ ಚಿತ್ರರಂಗದಿಂದ ಹಿಂದೆ ಸರಿದಿದ್ದರು.