ಅಂತರಾಷ್ಟ್ರೀಯ

ಧರ್ಮ ಮತ್ತು ಭಯೋತ್ಪಾದನೆ ಬೆಸೆಯದಂತೆ ವಿಶ್ವಕ್ಕೆ ಮೋದಿ ಸಲಹೆ

Pinterest LinkedIn Tumblr

modi-main1

ನಾಯ್ ಪ್ಯಿ ತಾವ್: ಧರ್ಮ ಮತ್ತು ಭಯೋತ್ಪಾದನೆ ನಡುವಿನ ಬೆಸುಗೆಯನ್ನು ವಿಶ್ವ ಸಮುದಾಯ ತಿರಸ್ಕರಿಸಬೇಕೆಂದು ಕರೆ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲ ರೀತಿಯ ಉಗ್ರ ಚಟುವಟಿಕೆಗಳನ್ನು ತಡೆಯಲು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಗಳು ಒಂದಾಗಬೇಕು ಎಂದಿದ್ದಾರೆ.

ಸೈಬರ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ದೇಶಗಳ ನಡುವಿನ ಸಂಬಂಧಗಳಿಗೆ ಮತ್ತು ಬೆಳವಣಿಗೆಗೆ ದಾರಿಯಾಗಬೇಕೆ ಹೊರತು ಭಿನಾಭಿಪ್ರಾಯಗಳಿಗಲ್ಲ ಎಂದು ಪೂರ್ವ ಏಶಿಯಾ ಶೃಂಗ ಸಭೆಯಲ್ಲಿ ಕರೆ ಕೊಟ್ಟಿದ್ದಾರೆ.

ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮತ್ತಿ ಚೈನೀಸ್ ಪ್ರೀಮಿಯರ್ ಲಿ ಕೇಕ್ವೆಂಗ್ ಒಳಗೊಂಡಂತೆ ೧೮ ರಾಷ್ಟ್ರಗಳ ನಾಯಕರು ಮಯನ್ಮಾರಿನ ರಾಜಧಾನಿಯಲ್ಲಿ ೧ ದಿನದ ಪೂರ್ವ ಏಷಿಯಾ ಶೃಂಗ ಸಭೆಗೆ ಸೇರಿದ್ದಾರೆ.
“ಮನುಷ್ಯತ್ವದಲ್ಲಿ ನಂಬಿಕೆ ಇಟ್ಟವರೆಲ್ಲಾ ಒಂದಾಗಿ ಬರಬೇಕು. ರಿಲಿಜಿಯನ್ ಮತ್ತು ಭಯೋತ್ಪಾದನೆಗಿರುವ ಬೆಸುಗೆಯನ್ನು ತಿರಸ್ಕರಿಸಬೇಕು” ಎಂದಿದ್ದಾರೆ.

“ಭಯೋತ್ಪಾದನೆ ಮತ್ತು ತೀವ್ರಗಾಮಿತನದ ಸವಾಲುಗಳು ಹೆಚ್ಚಿವೆ. ಇದಕ್ಕೂ ಮತ್ತು ಡ್ರಗ್ ಸಾಗಾಣೆ, ಶಸ್ತ್ರಾಸ್ತ್ರ ಕಳ್ಳಸಾಗಾಣೆ, ಮತ್ತು ಅಕ್ರಮ ಹಣ ಚಲಾವಣೆಗು ಸಂಬಂಧವಿದೆ” ಎಂದಿದ್ದಾರೆ.

Write A Comment