ರಾಷ್ಟ್ರೀಯ

ಸಂಸದರ ಮಾದರಿ ಗ್ರಾಮ: ಯೋಜನೆಗೆ ಪ್ರಧಾನಿ ಚಾಲನೆ

Pinterest LinkedIn Tumblr

Modi_-launches_Mps

ಹೊಸದಿಲ್ಲಿ, ಅ.11: ಪ್ರಧಾನಿಯವರ ಮಹತ್ವಾಕಾಂಕ್ಷಿಯಾದ ಸಂಸದರ ಮಾದರಿ ಗ್ರಾಮ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು.

ಈ ಯೋಜನೆಯ ಅಡಿಯಲ್ಲಿ ಸುಮಾರು 800 ಸಂಸದರು 2019ರ ಒಳಗೆ ತಲಾ ಮೂರು ಗ್ರಾಮಗಳ ಭೌತಿಕ ಮತ್ತು ಸಾಂಸ್ಥಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ನೆರವಾಗುವ ಉದ್ದೇಶ ಹೊಂದಲಾಗಿದೆ. ತಮ್ಮ ಸ್ವಾತಂತ್ರದಿನದ ಭಾಷಣದಲ್ಲಿ ‘ಸಂಸದ್ ಆದರ್ಶ ಗ್ರಾಮ್ ಯೋಜನಾ’ವನ್ನು ಪ್ರಧಾನಿ ಮೋದಿ ಪ್ರಕಟಿಸಿದ್ದರು.

ಯೋಜನೆಯ ಅಡಿಯಲ್ಲಿ ಯಾವುದೇ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಸಂಸದರು ಹೊಂದಿರುತ್ತಾರೆ. ಆದರೆ ತಮ್ಮ ಸ್ವಂತ ಗ್ರಾಮ ಇಲ್ಲವೇ ತಮ್ಮ ಸಂಬಂಧಿಗಳು ವಾಸಿಸುವ ಗ್ರಾಮಗಳನ್ನು ಅವರು ಆಯ್ಕೆ ಮಾಡಿಕೊಳ್ಳುವಂತಿಲ್ಲ.

ತಾವು ವಾರಣಾಸಿ ಸಂಸತ್ ಕ್ಷೇತ್ರದ ಗ್ರಾಮವೊಂದನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಮೋದಿ ಈಗಾಗಲೇ ತಿಳಿಸಿದ್ದಾರೆ. ಸಂಸದರ ನಾಯಕತ್ವ ಮತ್ತು ಅವರ ಪ್ರಯತ್ನಬಲದ ಮೂಲಕ 2016ರ ಹೊತ್ತಿಗೆ ತಲಾ ಒಂದೊಂದು ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಎಲ್ಲ 800 ಸಂಸದರು ತಲಾ ಮೂರು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಲ್ಲಿ 2019ರ ಹೊತ್ತಿಗೆ 2,500 ಗ್ರಾಮಗಳ ಅಭಿವೃದ್ಧಿಯಾಗಲಿದೆ ಎಂದು ಯೋಜನೆಗೆ ಚಾಲನೆ ನೀಡುತ್ತ ಪ್ರಧಾನಿ ಹೇಳಿದರು.

ಈ ಯೋಜನೆಯ ಹಿನ್ನೆಲೆಯಲ್ಲಿ ರಾಜ್ಯಗಳು ಇಂತಹದೇ ಯೋಜನೆಯೊಂದನ್ನು ರೂಪಿಸಬಹುದು. ಆ ಮೂಲಕ ಪ್ರತಿವರ್ಷ 6-7 ಸಾವಿರ ಗ್ರಾಮಗಳ ಅಭಿವೃದ್ಧಿ ಸಾಧ್ಯವಿದೆ ಎಂದು ಅವರು ತಿಳಿಸಿದರು.

Write A Comment