ಅಂತರಾಷ್ಟ್ರೀಯ

ಮೋದಿಯ ‘ಯಶಸ್ವಿ’, ‘ತೃಪ್ತಿದಾಯಕ’ ಅಮೆರಿಕ ಪ್ರವಾಸ ಮುಕ್ತಾಯ

Pinterest LinkedIn Tumblr

mod2

ವಾಶಿಂಗ್ಟನ್, ಅ. 1: ‘ತ್ಯಾಂಕ್ ಯು ಅಮೆರಿಕ’ ಎಂಬ ಘೋಷಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ತನ್ನ ಐದು ದಿನಗಳ ಅಮೆರಿಕ ಪ್ರವಾಸವನ್ನು ಮಂಗಳವಾರ ಮುಕ್ತಾಯಗೊಳಿಸಿದರು ಹಾಗೂ ತನ್ನ ಪ್ರವಾಸ ‘‘ಅತ್ಯಂತ ಯಶಸ್ವಿ ಮತ್ತು ತೃಪ್ತಿದಾಯಕ’’ವಾಗಿತ್ತು ಎಂದು ಬಣ್ಣಿಸಿದರು.

ಮಂಗಳವಾರ ಎರಡು ಸುತ್ತಿನ ಮಾತುಕತೆಗಳ ಬಳಿಕ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪ್ರಧಾನಿ ನರೇಂದ್ರ ಮೋದಿ ಜಂಟಿ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದರು. ಉಭಯ ದೇಶಗಳ ನಡುವಿನ ವ್ಯೆಹಾತ್ಮಕ ಹಾಗೂ ಜಾಗತಿಕ ಭಾಗೀದಾರಿಕೆ, ಅವುಗಳ ಪರಸ್ಪರ ವೌಲ್ಯಗಳು ಮತ್ತು ಸಹಕಾರವನ್ನು ಬಲಗೊಳಿಸುವ ಇಚ್ಛೆ ಸೇರಿದಂತೆ ವಿವಿಧ ವಿಷಯಗಳು ಜಂಟಿ ಹೇಳಿಕೆಯಲ್ಲಿ ಪ್ರಸ್ತಾಪಗೊಂಡವು. ಪ್ರವಾಸದುದ್ದಕ್ಕೂ ಚುರುಕಾಗಿ ಓಡಾಡಿದ ಹಾಗೂ ಸಂವಹನ ನಡೆಸಿದ 64 ವರ್ಷದ ಮೋದಿ ಎಲ್ಲರ ಮನಗೆದ್ದರು. ಈ ಸಂದರ್ಭದಲ್ಲಿ ಭಾರತವನ್ನು ಪರಿವರ್ತನೆಗೊಳಿಸುವುದಾಗಿ ಘೋಷಿಸಿದರು. ಈ ನಿಟ್ಟಿನಲ್ಲಿ ರೈಲ್ವೆ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಅಮೆರಿಕದ ಹೂಡಿಕೆ ಮತ್ತು ಸಹಕಾರವನ್ನು ಅವರು ಕೋರಿದರು.

‘‘ಕಾಲ ಮೀರುವ ಮೊದಲೇ’’ ಭಾರತದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸುವಂತೆ ಹಾಗೂ ವಿಸ್ತರಿಸುವಂತೆ ಅವರು ಅಮೆರಿಕದ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳನ್ನು ಒತ್ತಾಯಿಸಿದರು. ಭಾರತದಲ್ಲಿ ವ್ಯಾಪಾರವನ್ನು ಸುಲಲಿತಗೊಳಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಆರು ತಿಂಗಳಲ್ಲಿ ಜಾರಿಗೊಳಿಸುವುದಾಗಿ ಅವರು ಭರವಸೆ ನೀಡಿದರು.

3 ಸ್ಮಾರ್ಟ್ ಸಿಟಿ ಸ್ಥಾಪನೆಗೆ ಅಮೆರಿಕ ನೆರವು
ವಾಶಿಂಗ್ಟನ್, ಅ. 1: ನೂರು ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ಭಾರತದ ಯೋಜನೆಗೆ ಪೂರಕವಾಗಿ ಅವುಗಳ ಪೈಕಿ ಮೂರು ನಗರಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ ಭಾರತಕ್ಕೆ ನೆರವು ನೀಡಲಿದೆ. ಜೊತೆಗೆ, 500 ನಗರಗಳಲ್ಲಿ ಶುದ್ಧ ನೀರು ಪೂರೈಸಲು ಮತ್ತು ಚರಂಡಿ ವ್ಯವಸ್ಥೆ ಕಲ್ಪಿಸಲು ನಾಗರಿಕ ಸಮಾಜ ಮತ್ತು ಅಧಿಕಾರಿಗಳೊಂದಿಗೆ ಕೈಜೋಡಿಸಲಿದೆ.

ಈ ಮೂರು ನಗರಗಳೆಂದರೆ ಅಲಹಾಬಾದ್, ಅಜ್ಮೀರ್ ಮತ್ತು ವಿಶಾಖಪಟ್ಟಣಂ. ಬುಧವಾರ ಇಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಮಾತುಕತೆಗಳು ನಡೆದ ಬಳಿಕ ಈ ಘೋಷಣೆ ಮಾಡಲಾಗಿದೆ.

ಭಾರತ 100 ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ ಹಾಗೂ ಇದಕ್ಕೆ ಸಂಬಂಧಿಸಿ ಕೇಂದ್ರ ಬಜೆಟ್‌ನಲ್ಲಿ 7,060 ಕೋಟಿ ರೂ.ಯನ್ನು ಒದಗಿಸಲಾಗಿದೆ. ತನ್ನ ಐದು ದಿನಗಳ ಅಮೆರಿಕ ಪ್ರವಾಸವನ್ನು ಮೋದಿ ಮಂಗಳವಾರ ಮುಕ್ತಾಯಗೊಳಿಸಿದ್ದಾರೆ. ತನ್ನ ಅಮೆರಿಕ ಪ್ರವಾಸ ‘‘ಅತ್ಯಂತ ಯಶಸ್ವಿ ಹಾಗೂ ತೃಪ್ತಿದಾಯಕವಾಗಿತ್ತು’’ ಎಂದು ಹೇಳಿರುವ ಅವರು ಅಮೆರಿಕಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

Write A Comment